ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಘ ಮಾಡುವ ಚಿತ್ರಾನ್ನ ಸೂಪರ್ (Meghashri Bhagavatar | Chitranna | Mussanje Matu)
ಸುದ್ದಿ/ಗಾಸಿಪ್
Feedback Print Bookmark and Share
 
ಹುಬ್ಬಳ್ಳಿ, ಮುಸ್ಸಂಜೆ ಮಾತು, ಜಂಗ್ಲಿ, ತಬ್ಬಲಿ ಮುಂತಾದ ಪ್ರಮುಖ ಚಿತ್ರಗಳಲ್ಲಿ ನಟಿಸಿದ ಮೇಘಶ್ರೀ ಭಾಗವತರ್ ಟಿವಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಿಂದಿನಿಂದಲೂ ಅವರ ಕುಟುಂಬ ನಾಟಕ ಹಾಗೂ ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡು ಬಂದಿದೆ.

ಹಾಗಾಗಿ ಮೇಘಾಳಿಗೆ ಅಭಿನಯ ಹೇಳಿಕೊಡುವ ಕೆಲಸವಿಲ್ಲ. ಶೂಟಿಂಗ್ ಇಲ್ಲದಾಗ ಮನೆ ಬಿಟ್ಟು ಕದಲುವುದಿಲ್ಲ, ಬದಲಿಗೆ ಅಮ್ಮ ಮತ್ತು ಅಕ್ಕನೊಂದಿಗೆ ಹರಟುತ್ತ ಕುಳಿತು ಬಿಡುತ್ತೇನೆ ಎನ್ನುತ್ತಾರೆ ಮೇಘ.

ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತೇನೆ. ಅಲ್ಲದೆ ಕೆಲವೊಮ್ಮೆ ನಾನೇ ಅಡುಗೆ ಮಾಡುತ್ತೇನೆ ಎಂದರು. ನಾನು ಮಾಡಿದ ಚಿತ್ರಾನ್ನ ಸಖತ್ತಾಗಿರುತ್ತೆ ಎಂದು ಮೇಘ ತಮ್ಮ ಅಡುಗೆಯ ಬಗೆಗೆ ಹೆಮ್ಮೆಯೂ ಪಟ್ಟುಕೊಂಡರು.

ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರುವ ಅವರು ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಕಾಸ್ಟೂಮ್ ಡಿಸೈನ್ ಕೂಡ ಮಾಡುತ್ತಾರಂತೆ. ಟಿವಿಗಳ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಮೇಘಾಳಿಗೆ ಮುಂದೆ ಫ್ಯಾಶನ್ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡುವ ಆಸೆಯಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೇಘಶ್ರೀ ಭಾಗವತರ್, ಚಿತ್ರಾನ್ನ, ಮುಸ್ಸಂಜೆ ಮಾತು