ಪೆರೋಲ್ ಚಿತ್ರ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಆ ಚಿತ್ರದಲ್ಲಿ ನಟಿಸುತ್ತಿರುವ ಹುಡುಗರು. ನಾಯಕ ನಟರಾಗುವ ಮುನ್ನವೇ ಈ ನವ ತರುಣರು ಶೂಟಿಂಗ್ ಸೆಟ್ಟಿನಲ್ಲಿ ವಿಲನ್‌ಗಳಂತೆ ಒಬ್ಬರಿಗೊಬ್ಬರು ಬಡಿದಾಡಿಕೊಡು ಸುದ್ದಿ ಮಾಡಿದ್ದರು. ಅನಂತರ ಹಾಗೆ ಮಾಡೇ ಇಲ್ಲ, ಇದೆಲ್ಲ ನಿರ್ಮಾಪಕರ ಕಟ್ಟು ಕಥೆ ಎಂದರು ಇದೇ ನಾಯಕರು. ಅಂತೂ ಇದೆಲ್ಲವೂ ಸುದ್ದಿಯಾದುದು ನಿಜ.
ಸದ್ಯ ಚಿತ್ತೀಕರಣ ಮುಗಿದಿದೆ. ಹೀರೋಗಳು ಡಬ್ಬಿಂಗ್ ರೂಂನಲ್ಲಿ ಡಬ್ಬಿಂಗ್ ಮಾಡುವ ಕಾಯಕದಲ್ಲಿ ತಲ್ಲಿನರಾಗಿದ್ದಾರೆ. ಕಳೆದವಾರ ಪ್ರಸಾದ್ ಸ್ಟುಡಿಯೋದಲ್ಲಿ ಮಾತುಗಳ ಧ್ವನಿ ಮುದ್ರಣ ಕಾರ್ಯ ನಡೆಯಿತು. ಶೇಖರ್ ಕಥೆ, ಚಿತ್ರಕಥೆ ರಚಿಸಿ ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಬಾಲಾಜಿ.ಕೆ.ಮಿತ್ರನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರದೀಪ್, ವಿಶ್ವಾಸ್, ಸೂರಜ್, ಲಿಖಿತ ಶೆಟ್ಟಿ, ಶರತ್ ಕುಮಾರ್, ರಾಣಿ, ಸುಪ್ರಿತ, ಕೃತಿಕ, ಕಿಶೋರ್, ಸುರೇಶ್ ತಾರಾಗಣದಲ್ಲಿದ್ದಾರೆ.