ಈ ಚೆಲುವೆಯ ಹೆಸರು ಪದ್ಮಪ್ರಿಯ ಈಗಾಗಲೇ 31 ಚಿತ್ರಗಳಲ್ಲಿ ಅಭಿನಯಿಸಿರುವ ಪದ್ಮಪ್ರಿಯ ಸದ್ಯ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಇಲ್ಲಿ ಅವರು ಅಭಿನಯಿಸುತ್ತಿರುವ ಚಿತ್ರದ ಹೆಸರು ತಮಸ್ಸು. ಅಗ್ನಿ ಶ್ರೀದರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅವರು ಶಿವರಾಜ್ ಕುಮಾರ್ ಅವರಿಗೆ ಜೋಡಿ.
ಹಿಂದಿ ಸೇರಿದಂತೆ ಪದ್ಮಪ್ರಿಯಾ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ನಟಿಸಿದ್ದಾರೆ. ಮೂಲತ: ಮಾಡೆಲಿಂಗ್ ಲೋಕದಿಂದ ಬಂದ ಪದ್ಮಪ್ರಿಯಾ ಬಣ್ಣ ಹಚ್ಚಿದ ಮೊದಲ ಚಿತ್ರ ತೆಲುಗಿನ ಸೀನು ವಾಸಂತಿ ಲಕ್ಷಿ (2003).
ದೆಹಲಿಯಲ್ಲಿ ಹುಟ್ಟಿ ಚೆನೈನಲ್ಲಿ ವಾಸ ಮಾಡುತ್ತಿದ್ದರೂ ಪದ್ಮ ಹೈಸ್ಕೂಲ್ ಹಾಗೂ ಎಂಬಿಎ ಓದಿದ್ದು ನಮ್ಮ ಬೆಂಗಳೂರಿನಲ್ಲಿ. ಹಾಗಾಗಿ ಅವರು ಹೊರಗಿನವರಲ್ಲ!
2001ರಲ್ಲಿ ಮಿಸ್ ಆಂಧ್ರಪ್ರದೇಶ ಕಿರೀಟ ತೊಟ್ಟ ಪ್ರಿಯಾ 2007ರಲ್ಲಿ ತಮಿಳು ಚಿತ್ರವೊಂದಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಸಹ ಬಾಚಿಕೊಂಡಿದ್ದಾರೆ. 2009ರ ಒಂದೇ ವರ್ಷದಲ್ಲಿ ಪದ್ಮಪ್ರ್ರಿಯಾ5 ಭಾಷೆಯ ಒಟ್ಟು 8 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ!