ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಯೋಗಿ'ಯಲ್ಲಿ ರೌಡಿ ಪಾತ್ರ ಖುಷಿ ತಂದಿದೆ ಎಂದ ಶಿರಿನ್ (Shirin | Yogi | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Shirin
MOKSHA
ಬಿಂದಾಸ್ ಆಗಿ ಮಾತಿಗೆ ಕುಳಿತ ನಟಿ ಶಿರಿನ್ 'ಯೋಗಿ' ಚಿತ್ರದಲ್ಲಿ ಪ್ರಥಮ ಬಾರಿ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗಿ ಮಾತಾಡುತ್ತಿದ್ದರು. ನನಗೆ ಹದಿನೈದು ತುಂಬಿದ ದಿನಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೆನೆ. ಲವ್ ಪಾತ್ರದಿಂದ ಹಿಡಿದು ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಈ ಚಿತ್ರದಲ್ಲಿ ಮೊದಲ ಬಾರಿಗೆ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡೆ ಎನ್ನುತ್ತಾರೆ ಶಿರಿನ್.

ಅಂದರೆ ಪಾತ್ರದಲ್ಲಿ ರೌಡಿಯೊಬ್ಬನ ಜೊತೆ ಸದಾ ಇರುತ್ತೇನೆ. ಒಳ್ಳೆ ಪಾತ್ರವದು. ಅದಕ್ಕೆ ಒಪ್ಪಿಕೊಂಡೆ ಎಂದರು. ಆ ಪಾತ್ರಕ್ಕಾಗಿ ಅವರು ಹೋಂವರ್ಕ್ ಮಾಡಿದರಂತೆ. ನಿರ್ದೇಶಕರ ಬಳಿ ಪಾತ್ರದ ಬಗೆಗೆ ತಿಳಿದುಕೊಂಡು ಸಂಪೂರ್ಣ ಸಿದ್ದತೆ ಮಾಡಿಕೊಂಡರಂತೆ ಶಿರಿನ್.

ನಾಯಕಿ ಎಂದ ಮೇಲೆ ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಅವಳ ಧರ್ಮ. ಹಾಗಾಗಿ ನಾನು ನನ್ನ ನಾಯಕಿ ಇಮೇಜ್ ಬಿಟ್ಟು ಈ ಪಾತ್ರದಲ್ಲಿ ನಟಿಸಿಧ್ದೇನೆ ಎಂದರು.

ನಾನು ನಿರ್ದೇಶಕಿ ಆಗುವ ಕನಸು ಇನ್ನೂ ನನಸಾಗಿಲ್ಲ. ಆದರೆ ಒಂದಲ್ಲ ಒಂದು ದಿನ ತಾನು ನಿರ್ದೇಶಕಿ ಆಗುವುದು ಖಂಡಿತ ಎಂದು ಶಿರಿನ್ ಭರವಸೆಯ ಮಾತನಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿರಿನ್, ಯೋಗಿ, ರೌಡಿ, ಕನ್ನಡ ಸಿನಿಮಾ