ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಸ್ಕರ್ ಪ್ರಶಸ್ತಿ ಹಿಂದೆ ಕನ್ನಡಿಗ (Vijay Kumar | Slumdog | Resul Pokutty)
ಸುದ್ದಿ/ಗಾಸಿಪ್
Feedback Print Bookmark and Share
 
ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಸ್ಲಂ ಡಾಗ್ ಚಿತ್ರದ ಸೌಂಡ್ ಡಿಸೈನ್ ಹಾಗೂ ಎಡಿಟಿಂಗ್‌ನಲ್ಲಿ ಓರ್ವ ಕನ್ನಡಿಗನ ಕೈ ಚಳಕವೂ ಇದೆ. ಹೌದು. ಸ್ಲಂ ಡಾಗ್ ಸಿನೆಮಾದ ಶಬ್ದ ಗ್ರಹಣಕ್ಕೆ ಕೇರಳದ ರೆಸೂಲ್ ಪೊಕುಟ್ಟಿ ಆಸ್ಕರ್ ಪಡೆದರು. ಆದರೆ ಅವರ ಹಿಂದೆ ಒಬ್ಬ ಕನ್ನಡಿಗನಿದ್ದ ಎಂಬುದು ಹಲವರಿಗೆ ತಿಳಿದಿಲ್ಲ.

ಆತನ ಹೆಸರು ವಿಜಯ್ ಕುಮಾರ್. ಮೂಲತಃ ಚಾಮರಾಜನಗರ ತಾಲೂಕಿನ ಸಂತೇಮರ ಹಳ್ಳಿಯವರು. ರಸೂಲ್ ಪೊಕುಟ್ಟಿ ಸ್ಟೂಡಿಯೋ 'ಕ್ಯಾನರೀಸ್ ಪೋಸ್ಟ್ ಸೌಂಡ್'ನಲ್ಲಿ ಅಸೋಸಿಯೇಟ್ ಸೌಂಡ್ ಎಡಿಟರ್ ಆಗಿ ವಿಜಯ್ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ಸ್ಲಂ ಡಾಗ್ ಹಿಂದಿ ಅವತರಿಣಿಕೆಯ ಸೌಂಡ್ ಎಡಿಟಿಂಗ್ ಮಾಡಿದ್ದಾರೆ. ಇದನ್ನು ವಿಜಯ್ ವೃತ್ತಿಪರದಿಂದ ಕಲಿತದ್ದಲ್ಲ. ಕೇವಲ ಅನುಭವದಿಂದ ಗಳಿಸಿದ ವಿದ್ಯೆ. ಅವರಿಗೆ ಸಿನೆಮಾದ ಗೀಳು ಹತ್ತಲು ರಂಗ ಕಲಾವಿದರಾದ ಅವರ ತಂದೆ ಗೌಡಗೆರೆ ಮಹದೇವಪ್ಪ ಕಾರಣವಂತೆ.

ತಾಯ್ನಾಡಿನಲ್ಲಿ ಪದವಿ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಡಿಪ್ಲೂಮಾ ಕಲಿತು ಉದ್ಯೋಗ ಅರಿಸಿಕೊಡು ಮುಂಬೈಗೆ ಹಾರಿದ ವಿಜಯ್ ಹಲವು ಸಂಸ್ಥೆಗಳಲ್ಲಿ ಸಹಾಯಕರಾಗಿ ದುಡಿದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಬಿಟ್ಟಿದ್ದಾರೆ. ವಿಜಯ್ ಇನ್ನೂ ಕನ್ನಡದ ಕೀರ್ತಿ ಪತಾಕೆ ಹಾರಿಸಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್ ಕುಮಾರ್, ರೆಸೂಲ್ ಪೂಕುಟ್ಟಿ, ಸ್ಲಂ ಡಾಗ್ ಮಿಲಿಯೇರ್