'ಪೊರ್ಕಿ' ಚಿತ್ರದ ಜೀವಾಳವೇ ನಿರ್ದೇಶಕ ಶ್ರೀಧರ್ ಹಾಗೂ ಛಾಯಾಗ್ರಾಹಕ ಕೃಷ್ಣಕುಮಾರ್ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಗಳಿಕೆಯ ಮಾತುಗಳನ್ನಾಡಿದರು. ಅಸಲಿಗೆ 'ಪೊರ್ಕಿ' ಚಿತ್ರ ತೆಲುಗಿನ 'ಪೋಕಿರಿ'ಯ ರೀಮೇಕ್. ಇದಾಗಲೇ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.
ನಗರದ ಮಿನರ್ವ ಎಂಬ ಹಳೆಯ ಕಾರ್ಖಾನೆಯಲ್ಲಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದ ದರ್ಶನ್ ಚಿತ್ರೀಕರಣದ ನಡುವೆಯೇ ಪುಟ್ಟದಾದ ಸುದ್ದಿಗೋಷ್ಟಿಯಲ್ಲಿ ಬಂದು ಕುಳಿತರು. ಇದು ಗೆದ್ದರೂ, ಸೋತರೂ ನಿರ್ಮಾಪಕರ ಸಿನಿಮಾ ಎಂದು ಅವರು ಚಿತ್ರದ ನಿರ್ಮಾಪಕ ದತ್ತಾತ್ರೇಯರನ್ನು ಸಹ ಮೆಚ್ಚಿಕೊಂಡರು.
ಕನ್ನಡದ ಮಾರುಕಟ್ಟೆ ಚಿಕ್ಕದಾಗಿರುವುದರಿಂದ ಇಷ್ಟು ದೊಡ್ಡ ಬಜೆಟ್ನ ಸಿನಿಮಾ ತಡೆದುಕೊಳ್ಳುತ್ತದಯೇ ಎಂದುಕೊಂಡಿದ್ದರಂತೆ ಅವರು. ಆದರೆ, ದರ್ಶನ್ ತಮ್ಮ ಸ್ವಂತ ಚಿತ್ರದಂತೆ ಈ ಸಿನಿಮಾಕ್ಕೆ ಸಹಕಾರ ನೀಡಿದ್ದಾರೆ ಎಂದು ನಿರ್ದೇಶಕ ಶ್ರೀಧರ್ ಇದೇ ಸಂದರ್ಭ ಮೆಚ್ಚುಗೆಯ ನುಡಿಗಳನ್ನಾಡಿದರು.