ಪುಂಡ ಶೀಘ್ರದಲ್ಲೇ ಥಿಯೇಟರಿಗೆ ಬರಲಿದ್ದಾನೆ! ಯಾರಪ್ಪಾ ಇವನು ಅಂದುಕೊಳ್ಳಬೇಡಿ. ಇದು ಪುಂಡ ಚಿತ್ರ. ಇದೇ ಡಿಸೆಂಬರಿನಲ್ಲಿ ಚಿತ್ರ ಬೆಳ್ಳಿ ಪರದೆಯ ಮೇಲೆ ಮೂಡಿ ಬರಲಿದೆ.
ಸೂಪರ್ ಗುಡ್ ಕಂಬೈನ್ಸ್ ಲಾಂಛನದಡಿಯಲ್ಲಿ ವಿ.ಕುಪ್ಪಸ್ವಾಮಿ ಮತ್ತು ಎಂ.ಕುಮಾರ್ ಪುಂಡ ಚಿತ್ರವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಲಾಜಿ ಸ್ಟುಡಿಯೋದಲ್ಲಿ ಈ ಚಿತ್ರದ ಮಾತಿನ ಮರು ಲೇಪನ ಕಾರ್ಯ ಮುಕ್ತಾಯಗೊಂಡಿತು.
ಚಿತ್ರಕ್ಕೆ 87 ದಿವಸಗಳ ಕಾಲ ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಯೋಗೀಶ್ ಜೊತೆ ನಾಯಕಿಯಾಗಿ ಮೇಘನಾ ರಾಜ್ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ, ಜಿ.ವಿ.ಪ್ರಕಾಶ್ ಕುಮಾರ್ ಸಂಗಿತವಿದ್ದು, ಚಿತ್ರದ ಕಥೆ, ಸಂಭಾಷಣೆ ಮತ್ತು ನಿರ್ದೆಶನವನ್ನು ಎಚ್.ವಾಸು ನಿಭಾಯಿಸಿದ್ದಾರೆ. ಅಂದ ಹಾಗೆ, ನಾಯಕಿ ಮೇಘನಾ ಯಾರೆಂದುಕೊಂಡಿರಿ? ಖ್ಯಾತ ನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ.