ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೃಥ್ವಿ'ಯಲ್ಲಿ ಪುನೀತ್, ಪಾರ್ವತಿಯ ಹೂನಗೆ (Pruthwi | Puneeth | Parvathi | Jacob Vargis | Surappa Babu)
ಸುದ್ದಿ/ಗಾಸಿಪ್
Feedback Print Bookmark and Share
 
Puneeth and Parvathi in Pruthwi
MOKSHA
ಎರಡು ವರ್ಷಗಳಿಂದ ನಿರ್ಮಾಪಕ ಸೂರಪ್ಪ ಬಾಬು ಕನಸೊಂದನ್ನು ಕಟ್ಟಿಕೊಂಡಿದ್ದರು. ಅದೇನಪ್ಪಾ ಅಂದರೆ ಪುನೀತ್ ರಾಜ್ ಕುಮಾರ್ ನಾಯಕತ್ವದಲ್ಲಿ ಒಂದು ಚಿತ್ರ ಮಾಡುವುದು. ಇದಕ್ಕಾಗಿಯೇ ಬಾಬು ಮೂರ್ನಾಲ್ಕು ಕಥೆಗಳನ್ನು ಸಹ ಕೇಳಿದ್ದುಂಟು ಅದಾವುದು ಅವರಿಗೆ ಸರಿಬಂದಿರಲಿಲ್ಲವಂತೆ. ತನಗೇ ಕಥೆ ಒಪ್ಪಿಗೆಯಾಗದ ಮೇಲೆ ಇನ್ನು, ಮುನೀತ್‌ಗೆ ಹೇಗೆ ಒಪ್ಪಿಗೆಯಾದೀತು ಎಂದು ಸೂರಪ್ಪ ಬಾಬು ಸುಮ್ಮನಿದ್ದರು. ಆಗ ಅವರಿಗೆ ಸಿಕ್ಕಿದ್ದು ಜೇಕಬ್.

ಸವಾರಿ ಎಂಬ ಹಿಟ್ ಚಿತ್ರವನ್ನು ಕಿಸೆಯಲ್ಲಿಟ್ಟು ಕೂತಿದ್ದರು ಜೇಕಬ್. ಸೂರಪ್ಪ ಬಾಬುಗೆ ಜೇಕಬ್ ಅವರನ್ನು ಇಷ್ಟವಾಯಿತು. ಅವರ ಚಿತ್ರವೂ ಕೂಡಾ. ಜೇಕಬ್ ಹೇಳಿದ ಕಥೆಯೂ ಒಂದೇ ಪೆಟ್ಟಿಗೆ ಸೂರಪ್ಪ ಬಾಬು ಅವರ ಮನ ಗೆದ್ದಿತು. ತನ್ನ ಇಂಗಿತವನ್ನು ಜೇಕಬ್ ಅವರಿಗೆ ತಿಳಿಸಿದರು ಸೂರಪ್ಪ.

ಜೇಕಬ್ ತನಗೆ ಮೊದಲು ಪುನೀತ್ ಅವರ ಜತೆ ಮಾತನಾಡುತ್ತೇನೆ ಎಂದು ಸೂರಪ್ಪರಲ್ಲಿ ಹೇಳಿದರು. ಸೂರಪ್ಪ ವ್ಯವಸ್ಥೆ ಮಾಡಿಸಿದರು. ಜೇಕಬ್ ತುಂಬ ಹೊತ್ತು ಪುನೀತ್ ಜೊತೆಗೆ ಮಾತನಾಡಿ, ಅವರು ಇಷ್ಟಪಡುವ ಚಿತ್ರಗಳು, ಅವರ ಸ್ಟೈಲ್, ಅವರ ಆಸಕ್ತಿ ಎಲ್ಲವನ್ನು ಕೂಲಂಕುಷವಾಗಿ ತಿಳಿದುಕೊಂಡು 15 ದಿನದಲ್ಲಿ ನಿಮಗೊಪ್ಪುವ ಕಥೆ ಹಿಡಿದುಕೊಂಡು ಬರುತ್ತೇನೆ ಅಂದರು. ಪುನೀತ್‌ಗೆ ಸ್ವತಃ ಆಶ್ಚರ್ಯ. ಅರೆ, 15 ದಿನದಲ್ಲಿ ಕಥೆಯಾ ಎಂದು ಆಶ್ಚರ್ಯ ಹೊಂದಿದರೂ ಸುಮ್ಮನಾದರು.

ಜೇಕಬ್ ಕರೆಕ್ಟಾಗಿ 15 ದಿನದಲ್ಲಿ ಕಥೆ ಹಿಡಿದು ಪುನೀತ್ ಎದುರು ಹಾಜರ್. ಪುನೀತ್‌ಗೆ ಪರಮಾಶ್ಚರ್ಯ. ಹೇಳಿದಂತೆ ಹದಿನೈದೇ ದಿನಗಲ್ಲಿ ಕಥೆ ಹಿಡಿದುಕೊಂಡು ಬಂದರಲ್ಲ ಎಂದು. ಕಥೆ ಓದಿದಾಗಲೂ ಅಷ್ಟೆ. ಪುನೀತ್ ಮುಖ ಸಂತಸದಿಂದ ಅರಳಿತ್ತು. ಕಾರಣ, ಪುನೀತ್ ಅವರೇ ಹೇಳುವಂತೆ, ಪೃಥ್ವಿ ಕಥೆ ತುಂಬ ಇಷ್ಟವಾಯಿತು. ಅಷ್ಟೇ ಅಲ್ಲ, ಚಿತ್ರದಲ್ಲಿದ್ದ ಕಥೆ ನಾನು ಈವರೆಗೆ ಮಾಡಿದ ಎಲ್ಲ ಚಿತ್ರಗಳಿಗಿಂತಲೂ ಡಿಫರೆಂಟು. ಪೃಥ್ವಿಯಲ್ಲಿ ಬೇರೆಯದೇ ಪುನೀತ್ ಕಾಣಿಸಿಕೊಳ್ಳಲಿದ್ದಾನೆ ಅನ್ನೋದು ಪುನೀತ್ ಮಾತು.

ಇದು ಪೃಥ್ವಿ ಚಿತ್ರದ ಹಿಂದಿರುವ ಕಥೆ. ಈಗ 'ಪೃಥ್ವಿ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಬಾಬು ಅವರ ಕನಸು ನನಸಾದಂತಾಗಿದೆ. ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರಮೇಶ್ ಭಟ್ ,ಅವಿನಾಶ್ ಪ್ರಮುಖ ಪಾತ್ರಗಳಿಗಾಗಿ ಬಣ್ಣ ಹಚ್ಚಲಿದ್ದಾರೆ.

ಆಮೇಲೆ ಜೇಕಬ್ ತಮ್ಮ ಗಡ್ಡದೆಡೆಯಲ್ಲಿ ಮೌನಕ್ಕೆ ಶರಣಾಗಿದ್ದ ತುಟಿ ಬಿಚ್ಚಿದರು. ಇದುವರೆಗೆ ಸಿದ್ಧವಾಗಿರುವುದು ಕೇವಲ ಅಸ್ಥಿಪಂಜರ. ಅದಕ್ಕೆ ಇನ್ನು ಮುಂದೆ ಪುನೀತ್ ರಕ್ತ- ಮಾಂಸ ತುಂಬಲಿದ್ದಾರೆ ಎಂದು ಜೇಕಬ್ ಹುಬ್ಬು ಹಾರಿಸಿದರು. ಅಷ್ಟೇ ಅಲ್ಲ, ಪೃಥ್ವಿಯ ಮೂಲಕ ಗೆದ್ದೇ ಗೆಲ್ಲುತ್ತೇನೆ. ಗೆಲ್ಲಲೇಬೇಕು ಎಂಬ ಹಠ ನನ್ನಲ್ಲಿದೆ. ಇನ್ನೊಂದು ಅವಕಾಶ ಸಿಗುತ್ತದೆ ಎಂಬ ಆಸೆ ನನ್ನಲ್ಲಿಲ್ಲ. ಈಗ ಇರೋ ಅವಕಾಶದಲ್ಲೇ ಗೆಲ್ಲಬೇಕು ಎಂಬ ತತ್ವ ನನ್ನದು ಎಂದರು. ಪಕ್ಕದಲ್ಲೆ ಇದ್ದ ಪಾರ್ವತಿ ಹೂ ನಗು ಬೀರುತ್ತಲೇ ಇದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್, ಪಾರ್ವತಿ, ಪೃಥ್ವಿ, ಸೂರಪ್ಪ ಬಾಬು, ಜೇಕಬ್