ಕೃಷ್ಣನ್ ಲವ್ ಸ್ಟೋರಿ ಜೋರು

ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ 'ಕೃಷ್ಣನ್ ಲವ್ ಸ್ಟೋರಿ' ಜೋರಾಗಿ ನಡಿಯುತ್ತಿದೆ. ಉದಯ್.ಕೆ ಮೆಹ್ತಾ ಹಾಗು ಮೋಹನ್. ಜಿ .ನಾಯಕ್ ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸಾಗರ, ಕುಮಟಾ ಹಾಗೂ ಉಡುಪಿಗಳಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರ ತಂಡ 18 ದಿನಗಳ ಕಾಲ ಮಡಿಕೇರಿಯಲ್ಲಿ ಟೆಂಟ್ ಹಾಕಲಿದೆ. ಅಲ್ಲಿ ಅಜಯ್ ಮತ್ತು ರಾಧಿಕಾ ಪಂಡಿತ್ ಅಭಿನಯದಲ್ಲಿ ಹಾಡು ಹಾಗೂ ಚಿತ್ರದ ಕೆಲವು ಭಾಗದ ಚಿತ್ರೀಕರಣ ಸಾಗಲಿದೆ.ಅಲ್ಲಿಂದ ಶಿಂಷಾ ಮಾರ್ಗವಾಗಿ ಚಿತ್ರ ತಂಡ ಕೇರಳ ಮತ್ತು ಹೋಗೆನಕಲ್ ಫಾಲ್ಸ್‌ನತ್ತ ತೆರಳಲಿದೆ. ಈ ಚಿತ್ರದ ನಿರ್ದೇಶಕರಾದ ಶಶಾಂಕ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.ವಿ.ಶ್ರೀಧರ್ ಸಂಗಿತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದ್ದು ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಶಶಾಂಕ್ ಗೀತರಚನೆ ಮಾಡಿದ್ದಾರೆ.