ಎಸ್.ನಾರಾಯಣ್ ನಿರ್ದೇಶನದಲ್ಲಿ ನಿರ್ದೇಶಕ ಪ್ರೇಮ್ ನಾಯಕ ನಟ!
MOKSHA
ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಪ್ರೀತಿ ಏಕೆ ಭೂಮಿ ಮೇಲಿದೆ ಎಂದು ಪ್ರಶ್ನಿಸಲು ನಟಿಸಲು ಹೊರಟು ಮಕಾಡೆ ಮಲಗಿದ್ದು ಎಲ್ಲರಿಗೂ ಗೊತ್ತು. ಆದರೂ ಪ್ರೇಮ್ ನಟನಾಗುವ ಕನಸು ಬಿಟ್ಟಂತಿಲ್ಲ. ಈಗ ಎಸ್. ನಾರಾಯಣ್ ಅವರ ನಿರ್ದೇಶನದ ಚಿತ್ರವೊಂದಕ್ಕೆ ಪ್ರೇಮ್ ನಾಯಕ ನಟನಾಗಿ ನಟಿಸಲಿದ್ದಾರೆ ಎಂಬ ಗುಲ್ಲು ಹಬ್ಬಿದೆ.
ಹೌದು. ಪ್ರೇಮ್ ಹಾಗೂ ಎಸ್. ನಾರಾಯಣ್ ಜೋಡಿಯಾಗಿದ್ದಾರೆ. ಎಸ್. ನಾರಾಯಣ್ ಇತ್ತ ತಮ್ಮ ಮಗನ ಪ್ರೇಮ ಬಿಟ್ಟು ಬೇರೆ ನಟರನ್ನು ಹಾಕಿಕೊಂಡು ಸಿನಿಮಾ ಮಾಡಲು ಹೊರಟಂತಿದೆ. ಈಗಾಗಲೇ ಸುದೀಪ್ ಹಾಗೂ ಹೊಸ ಹುಡುಗಿ ಕ್ಯಾಥರಿನ್ ತಾರಾಗಣದ್ಲಲಿ ಹೆಸರಿಡದ ಚಿತ್ರವೊಂದನ್ನು ನಿರ್ದೇಶಿಸುವ ಜೊತೆಜೊತೆಗೇ ಪ್ರೇಮ್ ಹಾಕಿಕೊಂಡು ಚಿತ್ರ ನಿರ್ದೇಶಿಸುವ ಸುದ್ದಿಯೂ ಹೊರಬಿದ್ದಿದೆ.
MOKSHA
ಸುದೀಪ್ ಜತೆಗಿನ ಚಿತ್ರದ ನಂತರವಷ್ಟೇ ಎಸ್. ನಾರಾಯಣ್ ಪ್ರೇಮ್ ಜೊತೆಗಿನ ಚಿತ್ರದೆಡೆಗೆ ತಲೆ ಹಾಕಲಿದ್ದಾರೆ. ಹಾಗಾಗಿ ಪ್ರೇಮ್ ಜೊತೆಗಿನ ಚಿತ್ರ 2010ರಲ್ಲಿ ಆರಂಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮುಂಚೆ ಗಿಮಿಕ್ ಮಾಡೋದರಲ್ಲಿ ಎತ್ತಿದ ಕೈಯೆಂದು ಹೆಸರು ಪಡೆದ ತಾಜ್ ಮಹಲ್ ಖ್ಯಾತಿಯ ಆರ್. ಚಂದ್ರು ನಿರ್ದೇಶನದಲ್ಲಿ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ನಟಿಸೋದು ಅಂತ ಸುದ್ದಿಯಾಗಿತ್ತು. ಈಗ ಎಸ್. ನಾರಾಯಣ್ ಜೊತೆಗೆ ಎಂಬ ಸುದ್ದಿ ಹಬ್ಬಿದೆ ಅಷ್ಟೆ.