ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಂಗಾಲಿ ಬೆಡಗಿಯ ಐಂದ್ರಿತಾಳ ಕನ್ನಡ ಪ್ರೇಮ! (Aindritha Rey | Kannada Cinema | Manasaare | Junglee)
ಸುದ್ದಿ/ಗಾಸಿಪ್
Feedback Print Bookmark and Share
 
Aindritha Rey
MOKSHA
ಮುದ್ದು ಮುಖದ ಬೆಡಗಿ ಐಂದ್ರಿತಾ ರೇ ಮನೆ ಮಾತು ಬೆಂಗಾಲಿಯಾದರೂ ಇದೀಗ ಆಕೆ ಹೆಚ್ಚು ಕಡಿಮೆ ಕನ್ನಡ ಚಿತ್ರರಂಗದಲ್ಲಿ ನಂ.1 ಸ್ಥಾನದ ಸ್ಪರ್ಧೆಯತ್ತ ಮುಂಚೂಣಿಯಲ್ಲಿರುವ ನಟಿ. ಜಂಗ್ಲಿಯಲ್ಲಿ ಬಿಚ್ಚಮ್ಮನಾಗಿ ಮೈದೋರಿದರೂ ಮನಸಾರೆಯಲ್ಲಿ ಕಣ್ಣಿನಿಂದಲೇ ಮಾತಾಡಿ ಕನ್ನಡಿಗರ ಮನಗೆದ್ದವಳು. ಇಂತಿಪ್ಪ ಐಂದ್ರಿತಾ ರೇಗೆ ಕನ್ನಡ ಬರುತ್ತಾ? ಅಂತ ಹಲವರಿಗೆ ಪ್ರಶ್ನೆಯಿರಬಹುದು. ಕನ್ನಡ ಬರೋದಿಲ್ಲ ಅಂತ ಆರಂಭದಲ್ಲಿ ಅಂದರೂ, ಈಗ ಆಕೆ ನಾನು ಬೇರೆಯವರಿಗೂ ಕನ್ನಡ ಕಲಿಸಬಲ್ಲೆ ಎಂಬಷ್ಟು ಕಲಿತಿದ್ದಾಳಂತೆ!

ಅಬ್ಬಬ್ಬಾ.. ಅಂತ ಹುಬ್ಬೇರಿಸಬೇಡಿ. ಮನೆಯಲ್ಲಿ ಅಪ್ಪಟ ಬೆಂಗಾಲಿ ಮಾತಾಡಿದರೂ ಸಹ ಆಕೆಗೆ ಕನ್ನಡದ ಬಗ್ಗೆ ತುಂಬಾನೇ ಅಭಿಮಾನವಂತೆ. ಇತ್ತೀಚೆಗೆ ಖಾಸಗಿ ಎಫ್ಎಂ ಚಾನಲ್ಲೊಂದು ನಗರದಲ್ಲಿ ಆಯೋಜಿಸದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಐಂದ್ರಿತಾ, ಕನ್ನಡದ ಅನೇಕ ಶಬ್ದಗಳನ್ನು ಲೀಲಾಜಾಲವಾಗಿ ಉಚ್ಚರಿಸಿದರು. ಅಷ್ಟೇ ಅಲ್ಲ, ಕನ್ನಡದ ಶಬ್ದಗಳನ್ನು ಬೋರ್ಡ್ ಮೇಲೆ ಬರೆದು ನೆರೆದಿದ್ದ ಮಂದಿಯನ್ನು ಅಚ್ಚರಿಪಡಿಸಿದರು. ಕನ್ನಡದ ನಿತ್ಯ ಬಳಕೆಯ ಶಬ್ದಗಳನ್ನು ಅರಳು ಹುರಿದಂತೆ ಮಾತನಾಡುವ ಅವರು, ಬೇಕಾದರೆ ಮತ್ತೊಬ್ಬರಿಗೆ ಕಲಿಸಲು ಸಹ ರೆಡಿ ಅನ್ನುತ್ತಾರೆ.

ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರ ಭರ್ಜರಿ ಹಿಟ್ ಆಗಿದೆ. ಇದಲ್ಲದೆ, ಜಂಗ್ಲಿಯಲ್ಲಿ ಗ್ಲಾಮರ್ರಿಗೆ ಸೈ ಅನಿಸಿಕೊಂಡ ಬೆಡಗಿ ಮೊನ್ನೆ ಮೊನ್ನೆ ವಾಯುಪುತ್ರದಲ್ಲಿ ನನಗೆ ನಟನೆಯೂ ಗೊತ್ತು ಅಂತ ತೋರಿಸಿಕೊಟ್ಟಳು. ಅದಾಗಿ ಈಗ ಧೂಳ್ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟುಗಳು ಕೈಯಲ್ಲಿವೆ. ಬ್ಯುಸಿ ನಟಿಯಾಗಿ ಕೈತುಂಬ ಕೆಲಸ ಮಾಡುತ್ತಿರುವ ಐಂದ್ರಿತಾ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯ ಶಿಖರಕ್ಕೇರುತ್ತಿದ್ದಾರೆ. ಅದಕ್ಕಾಗಿಯೇ ಐಂದ್ರಿತಾ ಕನ್ನಡ ಕಲಿಯುವ ಕೆಲಸಕ್ಕೆ ಮೊದಲು ಕೈಹಾಕಿದ್ದು. ಆ ಮೂಲಕ ಕನ್ನಡಿಗ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುವ ಯೋಚನೆ ಅವರದ್ದು. ಐಂದ್ರಿತಾಗೆ ಆಲ್ ದಿ ಬೆಸ್ಟ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಂದ್ರಿತಾ ರೇ, ಕನ್ನಡ ಸಿನಿಮಾ, ಮನಸಾರೆ, ವಾಯುಪುತ್ರ, ಜಂಗ್ಲಿ