ಇದು ರಮ್ಯ ಹಾಗೂ ಕಿಟ್ಟಿ ಮದುವೆ ಕಥೆ. ಶಾಕ್ ಆಗಬೇಡಿ. ಕಿಟ್ಟಿ ಅತ್ತ ರವಿ ಬೆಳೆಗೆರೆ ಮಗಳನ್ನು ಮದುವೆಯಾದುದಂತೂ ನಿಜ. ಹಾಗಾಗದರೆ ಈ ರಮ್ಯ, ಕಿಟ್ಟಿಯು ಏನಪ್ಪಾ ವಿಷ್ಯಾ ಅಂತೀರಾ? ಅದೇರಿ... ಇದು ಸಂಜು ವೆಡ್ಸ್ ಗೀತಾ ಚಿತ್ರದ ಕಥೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯ ನಾಯಕ ನಾಯಕಿಯರಾಗಿ ನಟಿಸುತ್ತಿರುವ ಸಂಜು ವೆಡ್ಸ್ ಗೀತಾ ಚಿತ್ರದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನಡೆಯಿತು.
ಅಂದ ಹಾಗೆ ಬಲ್ಲ ಮೂಲಗಳ ಪ್ರಕಾರ, ಇದೂ ಒಂದು ಮಳೆಯ ಹಿನ್ನೆಲೆಯ ಚಿತ್ರವೇ ಎನ್ನಲಾಗುತ್ತಿದೆ. ಅದೇನೇ ಇರಲಿ. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ನಾಗಶೇಖರ್. ಈ ಹಿಂದೆ ಗಣೇಶ್ ತಾರಾಗಣದ್ಲಲಿ ಅರಮನೆ ಎಂಬ ಚಿತ್ರ ನಿರ್ದೇಶಿಸಿ ಬೆನ್ನುತಟ್ಟಿಸಿಕೊಂಡಿದ್ದ ನಾಗಶೇಖರ್ ತನ್ನ ಕನಸಿನಂತೆ ರಮ್ಯಳನ್ನೇ ನಾಯಕಿಯಾಗಿ ಆರಿಸಿ ಸಂಜು ವೆಡ್ಸ್ ಗೀತಾ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಜಸ್ಟ್ ಮಾತ್ ಮಾತಲಿ ಚಿತ್ರದ ಶೂಟಿಂಗ್ ಸಂದರ್ಭ ರಮ್ಯ ಮಾಡಿಕೊಡ ಕಿರಿಕ್‌ನಿಂದಾಗಿ ರಮ್ಯಾ ಸಂಜು ವೆಡ್ಸ್ ಗೀತಾದಿಂದ ಹೊರದಬ್ಬಲ್ಪಟ್ಟಿದ್ದಾರೆ ಎಂದು ಗುಲ್ಲೆಬ್ಬಿದ್ದರೂ, ಅದನ್ನು ನಾಗಶೇಖರ್ ತಿಳಿಯಾಗಿಸಿ, ಚಿತ್ರದ ಮುಹೂರ್ತ ಮಾಡುವ ಮೂಲಕ ಚಿತ್ರದ ನಾಯಕಿ ರಮ್ಯಾಳೇ ಎಂದು ಸಾಬೀತು ಪಡಿಸಿದ್ದಾರೆ.
ಈ ಚಿತ್ರವನ್ನು ಪ್ರಮೋದ್ ನಾರಾಯಣ್ ಹಾಗೂ ಮುರಳಿ ಮೋಹನ್ ನಿರ್ಮಿಸುತ್ತಿದ್ದಾರೆ. ರಂಗಾಯಣ ರಘು , ಶರಣ್ , ದತ್ತಣ್ಣ ಮತ್ತಿತರರು ಪೋಷಕ ಪಾತ್ರದಲ್ಲಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕರು ಕಾಲೇಜು ದಿನಗಳಿಂದ ಸ್ನೇಹಿತರಂತೆ. ಅಗಲೂ ಸಹ ನಾಟಕಗಳಲ್ಲಿ ಭಾಗವಹಿಸುತ್ತಿದ್ದರಂತೆ. ಈಗ ಮತ್ತೂಮ್ಮೆ ಅಂತಹ ಅವಕಾಶ ಕೂಡಿ ಬಂದಿದೆ ಎಂದು ಅವರು ಸಂತೋಷ ಪಟ್ಟರು. ಅದೇ ದಿನ ಕಂಠೀರವ ಸ್ಟುಡಿಯೋದಲ್ಲಿ ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ಚಿತ್ರತಂಡದ ವತಿಯಿಂದ ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು.