ಈಕೆಯದ್ದು 24 ಇಂಚು ಹೈಟು, 5 ಕೆಜಿ ವೈಟು, ವಯಸ್ಸು 16 ತುಂಬಿ 17 ಅಷ್ಟೆ. ಬೇಕಾದರೆ ಇವಳು ಬೀಯರ್ ಬಾಟಲಿಯಷ್ಟು ಮಾತ್ರ ಉದ್ದ ಇದ್ದಾಳೆ ಅಂದರೆ ನಿಮಗೆ ಹೆಚ್ಚು ಸುಲಭವಾಗಿ ಅರ್ಥವಾದೀತೇನೋ. ಜೋರಾಗಿ ಉಫ್ ಎಂದರೆ ಹಾರಿ ಹೋಗುತ್ತಾಳೇನೋ ಎನ್ನುವಷ್ಟು ಚೋಟ್ ಮೆಣಸಿನ ಕಾಯಿ ! ಹೆಸರು ಜ್ಯೋತಿ ಆಮ್ಗೆ. ನೋಡಲು ಮುದ್ದು ಮುದ್ದಾಗಿದ್ದಾಳೆ. ನೋಡ್ತಾ ನೋಡ್ತಾನೇ ಇರಬೇಕು ಎನ್ನುವ ಮೈ'ಮಾಟ'. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಪಟ ಪಟ ಅಂತ ಮಾತಾಡ್ತಾಳೆ.
ನಿಮಗೆ ಗೊತ್ತಾ ಈಕೆ ವಿಶ್ವದ ಅತೀ ಪುಟ್ಟ ನಟಿ! ಈಕೆ ಕನ್ನಡದಲ್ಲಿ ನಟಿಸುತ್ತಿರುವ ಚಿತ್ರದ ಹೆಸರು 'ಪಾನ್ ಸುಪಾರಿ.' ಇದು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕ ಕಾಲದಲ್ಲಿ ನಿರ್ಮಾಣವಾಗುತ್ತಿದೆ. ಇದನ್ನು ಹುತ್ತೇಶ್ ಅವರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ದ್ವಾರಕಾವಿಷ್ಣು ವಹಿಸಿದ್ದಾರೆ. ಇವರು ಬಿ.ಆರ್.ಪಂತಲು ಅವರ ಹತ್ತಿರದ ಸಂಬಂಧಿ.
ಮಿನಿ ಸ್ಟಾರ್ ಜ್ಯೋತಿ ಕನ್ನಡ ಹಿರಿತೆರೆಯಲ್ಲಿ ಮಿಂಚುತ್ತಾರಾ? ಪಾನ್ ಸುಪಾರಿ ಹಿಟ್ ಆಗುತ್ತಾ? ಲೆಟ್ಸ್ ವೈಟ್ ಅಂಡ್ ಸಿ ಅನ್ನದೆ ವಿಧಿಯಿಲ್ಲ.