ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಎಲ್ಲರಂತಲ್ಲ ನಮ್ ರಾಜಿ'ಯಲ್ಲಿ ಗಿರೀಶ್ ಮಟ್ಟಣ್ಣವರ್ (Kannada Cinema | Ellaranthalla Nam Raji | Girish Mattannavar)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಗಿರೀಶ್ ಮಟ್ಟಣ್ಣವರ್ ನಿಮಗೆಲ್ಲಾ ಗೊತ್ತೇ ಇರಬೇಕು. ಅವರೀಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಇರೋ ಬರೋ ಕೆಲಸಗಳ ಜತೆ ಧಾರವಾಹಿಯಲ್ಲೂ ನಟಿಸುತ್ತಾರಂತೆ. ಅದೇ ನಾಲ್ಕಾರು ದಿನಗಳ ಹಿಂದಷ್ಟೇ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ 'ಎಲ್ಲರಂತಲ್ಲ ನಮ್ ರಾಜಿ' ಧಾರಾವಾಹಿಯಲ್ಲಿ ಇವರು ನಟಿಸುತ್ತಿದ್ದಾರೆ. ಅದರಲ್ಲಿ ಇವರದ್ದು ಸುದ್ದಿ ವಾಹಿನಿಯೊಂದರ ವರದಿಗಾರನ ಪಾತ್ರ.

ಚಲನಚಿತ್ರದ ವಿಷಯಕ್ಕೆ ಬಂದರೆ ಇವರು ತಮಸ್ಸು ಚಿತ್ರದಲ್ಲೂ ನಟಿಸಿದ್ದಾರೆ. ಮಠದಲ್ಲೂ ಕಾಣಿಸಿಕೊಂಡಿದ್ದರು. ಇವೆಲ್ಲಾ ಸಣ್ಣಪುಟ್ಟ ಪಾತ್ರಗಳು. ಇನ್ನು ಇತ್ತೀಚೆಗೆ ಅವರೇ ನಾಯಕರಾಗಿ ನಟಿಸಿರುವ ಸಂಚು ತೆರೆಗೆ ಬರಲೂ ಸಜ್ಜಾಗಿದೆ. ನವ್ಯಾ ನಟರಾಜ್ ಈ ಚಿತ್ರದ ನಾಯಕಿ. ಸೈಬರ್ ಲೋಕದ ಅಪರಾಧವನ್ನು ಬಯಲಿಗೆಳೆಯುವ ವಿಭಿನ್ನ ಕಥಾ ಹಂದರ ಉಳ್ಳ ಚಿತ್ರ ಇದಂತೆ.

ಇದಲ್ಲದೇ ನಾನಾ ಪಾಟೇಕರ್ ಜತೆ ಯಕ್ಷ ಚಿತ್ರದಲ್ಲೂ ಒಂದು ಪಾತ್ರ ಮಾಡಿದ್ದಾರೆ. ಎಲ್ಲರಂತಲ್ಲ ರಾಜಿ ಧಾರವಾಹಿಯಲ್ಲಿ ಇವರೊಂದು ಒಂದು ಸ್ಟಿಂಗ್ ಆಪರೇಷನ್ ಮಾಡುತ್ತಾರಂತೆ. ನಿತ್ಯಾನಂದನ ಮಾದರಿಯ ಕಾಮಿಸ್ವಾಮಿಯೊಬ್ಬ ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡಲು ಹೋಗುವ ಸಂದರ್ಭ, ಅದನ್ನು ಪತ್ತೆಹಚ್ಚುವ ಕಾರ್ಯ ಮಟ್ಟಣ್ಣ ಅವರು ಮಾಡುತ್ತಾರಂತೆ. ರಹಸ್ಯ ಕ್ಯಾಮೆರಾ ಬಳಸಿ ಆ ವ್ಯಕ್ತಿಯ ಕೃತ್ಯವನ್ನು ಬಯಲಿಗೆ ಎಳೆಯುತ್ತಾರಂತೆ. ಒಟ್ಟಾರೆ ಮಟ್ಟಣ್ಣವರ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಲ್ಲರಂತಲ್ಲ ನಮ್ ರಾಜಿ, ಗಿರೀಶ್ ಮಟ್ಟಣ್ಣವರ್, ಕನ್ನಡ ಸಿನೆಮಾ