ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಗೊಳ್ಳಿ ರಾಯಣ್ಣ: ದರ್ಶನ್‌ಗೆ ಕೈಕೊಟ್ಟ ಪ್ರಿಯಾಮಣಿ (Sangolli Rayanna | Darshan | Priyamani)
ಸುದ್ದಿ/ಗಾಸಿಪ್
Bookmark and Share Feedback Print
 
WD
ಸಂಗೊಳ್ಳಿ ರಾಯಣ್ಣನ ಜತೆ ನಟಿಸಲು ಒಲ್ಲೆ ಎಂದಿದ್ದಾರಂತೆ ಬಹುಭಾಷಾ ನಟಿ ಪ್ರಿಯಾಮಣಿ. ಹೌದು. ಅಂದೊಮ್ಮೆ, ನನಗೆ ಕನ್ನಡದಲ್ಲಿ ನಟಿಸಲು ಅವಕಾಶನೇ ಸಿಕ್ತಿಲ್ಲ, ನಾನು ಬೆಂಗಳೂರು ಹುಡುಗಿ ಅಂದಿದ್ದ ಪ್ರಿಯಾಮಣಿಗೆ ಕೆಂಪುಹಾಸು ಹಾಸಿ ರಾಮ್‌ ಚಿತ್ರಕ್ಕೆ ಸ್ವಾಗತಿಸಿದ್ದೂ ಆಗಿದೆ. ಚಿತ್ರ ಹೆಸರು ಮಾಡಿದ್ದೂ ಆಗಿದೆ. ಅಷ್ಟರಲ್ಲೇ, ಪ್ರಿಯಾಮಣಿಗೆ ಕನ್ನಡದಲ್ಲಿ ಮತ್ತಷ್ಟು ಮಗದಷ್ಟು ಅವಕಾಶಗಳ ಸುರಿಮಳೆಯೂ ಆಗಿದೆ. ಅವುಗಳಳ ಪೈಕಿ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಕೂಡಾ ಒಂದಾಗಿತ್ತು ಅಂತ ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಿಲ್ಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ನಟಿ ಪ್ರಿಯಾಮಣಿ ನಾಯಕಿಯಾಗ್ತಾರೆ ಎನ್ನುವ ಸುದ್ದಿ ಎರಡು ವಾರದ ಹಿಂದೆ ಕೇಳಿ ಬಂದಿತ್ತು. ಚಿತ್ರ ನವೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿದೆ ಎಂದು ಸಹ ತಿಳಿಸಲಾಗಿತ್ತು. ಆದರೆ ಇದೀಗ ಪ್ರಿಯಾಮಣಿ ಚಿತ್ರದಿಂದ ಸರಿದಿದ್ದಾರೆ ಅಂತ ಸ್ವತಃ ಚಿತ್ರದ ನಿರ್ದೇಶಕ ನಾಗಣ್ಣ ಅವರೇ ಬಹಿರಂಗ ಪಡಿಸಿದ್ದಾರೆ.

ಈ ಭಾರೀ ಬಜೆಟ್ಟಿನ ಐತಿಹಾಸಿಕ ಚಿತ್ರಕ್ಕೆ ದರ್ಶನ್‌ರಂತಹ ಮಾಸ್ ಹೀರೋ ಜೊತೆ ನಟಿಸಲು ಒಪ್ಪದಿದ್ದುದಾರೂ ಯಾಕೆ ಎಂದು ಗಾಂಧಿನಗರದ ಪಂಡಿತರು ತಲೆಕೆರೆದುಕೊಳ್ಳುತ್ತಿದ್ದಾರೆ. ಡೇಟ್ಸ್ ಗೀಟ್ಸ್ ಸಮಸ್ಯೆ ಏನಿಲ್ಲವಾದರೂ, ಈಗಲೇ ಐತಿಹಾಸಿಕ ಚಿತ್ರಕ್ಕೆ ಬಣ್ಣ ಹಚ್ಚಿದರೆ ಮುಂದೆ ನನ್ನ ಭವಿಷ್ಯದ ಗತಿ ಏನಾದೀತು, ಅವಕಾಶವೇ ಬರದಿದ್ದರೆ ಎಂಬ ಚಿಂತೆ ಪ್ರಿಯಾಮಣಿಗೆ ಕಾಡಿದೆ ಅಂತ ಬಲ್ಲವರು ಹೇಳುತ್ತಿದ್ದಾರೆ. ಏನಪ್ಪಾ ಯಾರಿಗ್ಗೊತ್ತು ಬಿಡಿ ನಿಜಾಂಶ!

ಪ್ರಿಯಾಮಣಿ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಗೊಳ್ಳಿ ರಾಯಣ್ಣ, ದರ್ಶನ್, ಪ್ರಿಯಾಮಣಿ