ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಶಸ್ಸಿನ ಅಲೆಯಲ್ಲಿ ರಾಜು ತಾಳಿಕೋಟೆ (Raju Thalikote | Manasare | Pancharangi)
ಸುದ್ದಿ/ಗಾಸಿಪ್
Bookmark and Share Feedback Print
 
ರಾಜು ತಾಳಿಕೋಟೆ ಎಂಬ ಪೋಷಕ ನಟನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮನಸಾರೆಯಲ್ಲಿ ಅಪ್ಪಟ ಧಾರವಾಡ ಕನ್ನಡದಲ್ಲಿ ಚಿನಗುರುಳಿ ಹಾಗೆ ಮಾತಾಡಿದ್ದ ಅವರನ್ನು ಎಲ್ಲರೂ ಇಷ್ಟವಟ್ಟವರೇ. ಮನಸಾರೆ ಮಾಯೆಯಿಂದಲೋ ಏನೋ, ಅವರೀಗ ಕನ್ನಡದ ಅತ್ಯಂತ ಬ್ಯುಸಿ ಪೋಷಕ ನಟ ಎಂದರೆ ತಪ್ಪಾಗಲಾರದು.

ರಂಗಭೂಮಿ ಕಲಾವಿದರಾಗಿದ್ದ ಇವರು ಇದೀಗ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟ ಹಾಗೂ ಪೋಷಕ ನಟರಾಗಿ ತುಂಬಾ ಬ್ಯುಸಿ ಆಗಿದ್ದಾರೆ. ಪ್ರಸ್ತುತ ಎರಡು ಚಿತ್ರದಲ್ಲಿ ಸಕ್ರಿಯವಾಗಿದ್ದಾರೆ. ಇವರಿಗೆ ಇತ್ತೀಚೆಗೆ ಅವಕಾಶಗಳು ಹೆಚ್ಚು ಹೆಚ್ಚು ಅರಸಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇವರೊಬ್ಬ ರಂಗಾಯಣ ರಘು ಮಾದರಿಯ ಭರ್ಜರಿ ಬೇಡಿಕೆಯ ನಟರಾದರೂ ಸಂಶಯವಿಲ್ಲ.

ಇವರ ಅಭಿನಯಕ್ಕೆ ಮಾರುಹೋಗದ ಪ್ರೇಕ್ಷಕರೇ ಇಲ್ಲ. ಈಗಾಗಲೇ ಮನಸಾರೆ, ಲಿಫ್ಟ್ ಕೊಡ್ಲಾ, ಪಂಚರಂಗಿ, ಅಪ್ಪು ಪಪ್ಪು ಮತ್ತಿತತರ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕನ್ನಡದ ಪ್ರೇಕ್ಷಕರು ಇವರನ್ನು ಅತ್ಯಂತ ಕಡಿಮೆ ಚಿತ್ರದಲ್ಲಿಯೇ ಉತ್ತಮ ಅಭಿನಯಕಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಪ್ಪು ಪಪ್ಪು ಚಿತ್ರದಲ್ಲಿ ಇವರ ಸಂಭಾಷಣೆಗೆ ಹೆಚ್ಚು ಅವಕಾಶ ಇರಲಿಲ್ಲ. ಆದರೆ ಅಭಿನಯದಲ್ಲಿ ಉತ್ತಮ ಪ್ರತಿಭೆ ತೋರಿದ ರಾಜು ಅವರಿಗೆ ಈ ಚಿತ್ರ ಉತ್ತಮ ಪ್ರಶಂಸೆ ತಂದುಕೊಟ್ಟಿದೆ.

ಅದ್ಬುತ ಏರಿಳಿತದ ಧ್ವನಿ ಇವರ ಪ್ಲಸ್ ಪಾಯಿಂಟ್. ಹಣಕ್ಕಿಂತ ಕಲಾ ಸೇವೆಯೇ ಬಹಳ ಮುಖ್ಯ ಎಂದು ಭಾವಿಸಿರುವ ಇವರು ಕಡಿಮೆ ಅವಧಿಯಲ್ಲಿ ಇಷ್ಟು ಎತ್ತರಕ್ಕೆ ಏರಲು ಇದೇ ಕಾರಣವಾಗಿದೆ. ಒಟ್ಟಾರೆ ಇವರು ಕಳೆದ ವಾರ ತೆರೆಕಂಡ ಅಪ್ಪು ಪಪ್ಪು ಚಿತ್ರದಿಂದ ಎಲ್ಲೆಡೆ ಮನೆ ಮಾತಾಗಿದ್ದಾರೆ. ಅವರಿಗೊಂದು ಗುಡ್ ಲಕ್ ನಮ್ಮ ನಿಮ್ಮ ಕಡೆಯಿಂದ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜು ತಾಳಿಕೋಟೆ, ಮನಸಾರೆ, ಪಂಚರಂಗಿ, ಅಪ್ಪು ಪಪ್ಪು