ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್‌ಗೊಲಿದ ಬಿಳಿಕುದುರೆ ಜೊತೆ ನಿಖಿತಾ! (Darshan | Horse | Nikitha | Sangolli Rayanna)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟಿ ಪ್ರಿಯಾಮಣಿ ಕೈಕೊಟ್ಟ ನಂತರ ಸಂಗೊಳ್ಳಿ ರಾಯಣ್ಣನ ಕೈ ಹಿಡಿಯಲು ಇನ್ನೊಬ್ಬ ಜನಪ್ರಿಯ ನಟಿ ನಿಖಿತಾ ಬರುತ್ತಿದ್ದಾರೆ. ಚಿತ್ರ ಮಾಡಲು ಒಪ್ಪಿಕೊಂಡಿರುವ ನಿಖಿತಾ, ಪ್ರಿಯಾಮಣಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಅತ್ಯಂತ ಹೆಮ್ಮೆಯನ್ನೂ ಇವರು ವ್ಯಕ್ತಪಡಿಸಿದ್ದಾರೆ. ಕೊನೆಗೂ ಬಯಸಿದ ಮಾದರಿಯ ಪಾತ್ರವನ್ನು ಅದೃಷ್ಟದ ರೂಪದಲ್ಲಿ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆಯಂತೆ. ಈ ಚಿತ್ರದಲ್ಲಿ ತಾವು ಹಾಗೂ ದರ್ಶನ್ ಒಂದು ವಿಭಿನ್ನ ಪಾತ್ರದ ಮೂಲಕ ಮತ್ತೊಮ್ಮೆ ಎದುರಾಗುತ್ತಿದ್ದೇವೆ. ನಿಜಕ್ಕೂ ಇದು ಸಂತಸ ತಂದಿದೆ ಎನ್ನುತ್ತಾರೆ ನಿಖಿತಾ.

ಈ ಹಿಂದೆ ದರ್ಶನ್ ಜತೆ 'ಯೋಧ' ಚಿತ್ರದಲ್ಲಿ ನಟಿಸಿದ್ದರು ನಿಖಿತಾ. ಜೊತೆಗೆ ದರ್ಶನ್ ಅಭಿನಯದ ಪ್ರಿನ್ಸ್ ಚಿತ್ರಕ್ಕೂ ನಿಖಿತಾರೇ ನಾಯಕಿ. ಇದೀಗ ಮೂರನೇ ಬಾರಿ ದರ್ಶನ್ ಜೊತೆ ನಟಿಸುವ ಅವಕಾಶ ಪಡೆದಿದ್ದಾರೆ ಈ ನಿಖಿತಾ.

ಇದೀಗ ಚಿತ್ರದ ಚಿತ್ರೀಕರಣಕ್ಕಾಗಿ ಭರದ ಸಿದ್ಧತೆ ನಡೆದಿದ್ದು, ಸಂಗೊಳ್ಳಿ ರಾಯಣ್ಣನಿಗೆ ಒಪ್ಪುವ ಒಂದು ಬಿಳಿ ಕುದುರೆಯನ್ನು ತರಿಸಲಾಗಿದೆಯಂತೆ. ಇದರ ಬೆಲೆ ಬರೋಬ್ಬರಿ 17 ಲಕ್ಷ ರೂ. ಅಂತೆ. ಪೂರ್ತಿ ಅಚ್ಚ ಬಿಳಿಯ ಈ ಕುದುರೆ ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನ ಸವಾರಿಗೆ ಬಳಸಲಾಗುತ್ತದೆ. ಜೊತೆಗೆ, ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿ ಜಯಪ್ರದಾ ಕೂಡಾ ಮಿಂಚಲಿದ್ದಾರೆ.

ಒಟ್ಟಾರೆ ಬಿಳಿ ಕುದುರೆ ಹಾಗೂ ನಿಖಿತಾ ಬಂದ ಮೇಲೆ ಚಿತ್ರದ ಓಘ ಹೆಚ್ಚಿದ್ದು, ಇದೊಂದು ಯಶಸ್ವಿ ಚಿತ್ರ ಆಗುವಲ್ಲಿ ಸಂಶಯವಿಲ್ಲ ಎಂದು ನಿರ್ಮಾಪಕರೇ ಸ್ವತಃ ಭವಿಷ್ಯ ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ್ಶನ್, ಬಿಳಿ ಕುದುರೆ, ನಿಖಿತಾ, ಸಂಗೊಳ್ಳಿ ರಾಯಣ್ಣ