ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿಷ್ಣು'ವಿನ ಅವತಾರವೆತ್ತಲಿರುವ ಅಭಿಜಿತ್‌ (Vishnu | Abhijith | Shruthi | Ranjitha)
EVENT
ಚಿತ್ರದುರ್ಗದಿಂದ ಕನಸುಗಳ ಮ‌ೂಟೆ ಹೊತ್ತುಕೊಂಡು ಬೆಂಗಳೂರಿನ ಗಾಂಧಿನಗರಕ್ಕೆ ಬಂದಿಳಿದ ಅಭಿಜಿತ್‌ ಓರ್ವ ಪ್ರತಿಭಾವಂತ ನಟ. ಇವರು ನರ್ತಿಸಬಲ್ಲರು, ಹಾಡಬಲ್ಲರು, ಅವಕಾಶ ಸಿಕ್ಕರೆ ಮೈಕೊಡವಿಕೊಂಡು ನಿರ್ದೇಶನಕ್ಕೂ ಇಳಿಯಬಲ್ಲರು ಎಂಬುದಕ್ಕೆ ಹಲವು ನಿದರ್ಶನಗಳಿವೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಯಕನಾಗುವ ಮಹದಾಸೆ ಹೊತ್ತಿದ್ದ ಅಭಿಜಿತ್‌ಗೆ ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳು ದೊರೆತವು. ಶೃತಿ ಅಭಿನಯದ 'ರಂಜಿತಾ', 'ರಶ್ಮಿ' ಚಿತ್ರಗಳಲ್ಲಿ ನಾಯಕಪಾತ್ರ ಸಿಕ್ಕಿತಾದರೂ ಅವು ನಾಯಕಿ-ಪ್ರಧಾನ ಚಿತ್ರಗಳಾಗಿದ್ದರಿಂದ ಹೆಚ್ಚು ಗಿಟ್ಟಲಿಲ್ಲ. ಹೀಗಾಗಿ ಸಿಕ್ಕ ಪಾತ್ರಗಳಲ್ಲಿ ಅಥವಾ ಮ‌ೂರ್ನಾಲ್ಕು ಸೋದರರ ಪಾತ್ರಗಳಲ್ಲಿ ಒಬ್ಬನಾಗಿ ಅಭಿಜಿತ್‌ ಕಾಣಿಸಿಕೊಳ್ಳಬೇಕಾಯಿತು.

ಈ ನಡುವೆ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಾರ್ಯಕ್ರಮವೊಂದರಲ್ಲಿ ನಿರೂಪಕನಾಗುವ ಭಾಗ್ಯ ಅಭಿಜಿತ್‌ಗೆ ಲಭಿಸಿತು. ಮಂಜುಳಾ ಗುರುರಾಜ್‌ ಪುತ್ರಿ ಹಾಗೂ ರವಿಶಂಕರ್ ಪತ್ನಿ ಸಂಗೀತಾ ಜೊತೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮ ಇದಾಗಿದೆ. ಆದರೂ ಅವರಿಗೆ ಸಮಾಧಾನ ದೊರೆಯಲಿಲ್ಲ. ಒಂದು ಕೈ ನೋಡೋಣ ಎಂದುಕೊಂಡು ತಮ್ಮದೇ ನಿರ್ಮಾಣ-ನಿರ್ದೇಶನದ 'ಸಮರಸಿಂಹನಾಯ್ಕ' ಎಂಬ ಚಿತ್ರದಲ್ಲಿ ಅಭಿಜಿತ್‌ ಅಭಿನಯಿಸಿದರು ಆದರೆ ನಸೀಬು ಏಕೋ ಚೆನ್ನಾಗಿರಲಿಲ್ಲ. ಮತ್ತೆ ಎಂದಿನ ಪಾತ್ರಗಳಿಗೇ ಅವರು ಹಿಂದಿರುಗಿದರು.

ಆದರೆ ಈ ಬಾರಿ ಗೆದ್ದೇ ಗೆಲ್ಲಬೇಕು ಎಂದು ಅವರು ದೃಢಮನಸ್ಸು ಮಾಡಿದಂತಿದೆ. ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗಿಳಿದಿರುವ ಅವರು 'ವಿಷ್ಣು' ಎಂಬ ಚಿತ್ರದ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸುತ್ತಿದ್ದಾರೆ. ಈ ಚಿತ್ರದ ಪಾತ್ರವೊಂದರಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಆಶಿಷ್‌ ವಿದ್ಯಾರ್ಥಿ ಖಳನ ಪಾತ್ರವನ್ನು ವಹಿಸಿದ್ದಾರೆ.

ರೋಹಿಣಿ ಅಭಿಜಿತ್‌ ನಿರ್ಮಾಣದ ಈ ಚಿತ್ರಕ್ಕೆ ಕೃಪಾಕರ್ ಸಂಗೀತವನ್ನು ನೀಡಿದ್ದಾರೆ. ಮನೋಹರ್‌ರವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಮತ್ತು ಕೌರವ ವೆಂಕಟೇಶ್‌ರವರ ಸಾಹಸ ಚಿತ್ರಕ್ಕಿದೆ. ಈ ಪ್ರಯತ್ನದಲ್ಲಾದರೂ ಅಭಿಜಿತ್‌ ಯಶ ಕಂಡರೆ ಅದು ಸಂತೋಷಕರ ಸಂಗತಿಯೇ. ಅಭಿಜಿತ್‌ಗೆ ಒಳ್ಳೆಯದಾಗಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ