ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಅಭಿನಯಿಸಬೇಕಿದ್ದ ಪಾತ್ರದಲ್ಲಿ ಅಭಿಜಿತ್ (Abhijith | Vishnu | Vishnuvardhan | Samara Simha Nayka)
EVENT
ನಟ ಅಭಿಜಿತ್‌ ನಿರ್ದೇಶಿಸುತ್ತಿರುವ 'ವಿಷ್ಣು' ಚಿತ್ರದ ಚಿತ್ರೀಕರಣವು ಸಂಪೂರ್ಣಗೊಂಡು ಡಬ್ಬಿಂಗ್‌ ಹಂತವನ್ನು ತಲುಪಿದೆ. ಈ ಚಿತ್ರದಲ್ಲಿ ಅಭಿಜಿತ್‌ ದ್ವಿಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿಷ್ಣುವರ್ಧನ್‌ರವರನ್ನು ತಾವು ನಿರ್ದೇಶಿಸಬೇಕೆಂಬ ಮಹದಾಸೆಯಿಂದ 'ವಿಷ್ಣು' ಎಂಬ ಟೈಟಲ್‌ನ್ನು ಚಿತ್ರಕ್ಕಿಟ್ಟು ಅಭಿಜಿತ್‌ ಕಥೆಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದರಂತೆ. ಆದರೆ ಅಚಾನಕ್ಕಾಗಿ ಅವರು ಕಣ್ಮರೆಯಾಗಿದ್ದರಿಂದ ಅವರು ನಿರ್ವಹಿಸಬೇಕಾಗಿದ್ದ ತಂದೆಯ ಪಾತ್ರವನ್ನು ತಾವೇ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡ ಅಭಿಜಿತ್‌, ಅವರ ಮಟ್ಟಕ್ಕೆ ಅಭಿನಯಿಸಲು ತಮಗಾಗಿಲ್ಲ ಹಾಗೂ ಅವರ ಆಶೀರ್ವಾದದಿಂದಲೇ ಚಿತ್ರ ಚೆನ್ನಾಗಿ ಬಂದಿದೆ ಎನ್ನುವ ಮ‌ೂಲಕ ವಿನೀತರಾದರು.

ಇದೇ ತಮ್ಮ ಮೊದಲ ಚಿತ್ರವೆಂಬಂತೆ ಶ್ರಮವಹಿಸಿ ಕೆಲಸ ಮಾಡಿರುವ ಅಭಿಜಿತ್‌ ಹೊಡೆದಾಟದ ದೃಶ್ಯವೊಂದರಲ್ಲಿ ಮೈಗೆ ಪೆಟ್ಟುತಿಂದರೂ ಅದನ್ನು ಲೆಕ್ಕಿಸದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರಂತೆ. ತಮ್ಮ ನಟನೆ-ನಿರ್ದೇಶನದ 'ಸಮರಸಿಂಹ ನಾಯ್ಕ' ಚಿತ್ರವು ಸೋತಿದ್ದರಿಂದ ಇಲ್ಲಿ ಆ ಬಗೆಯ ಯಾವ ತಪ್ಪುಗಳೂ ಆಗಬಾರದು ಎಂಬ ನಿಷ್ಠೆಯಿಂದ ಅವರು ಚಿತ್ರವನ್ನು ಕಟ್ಟುತ್ತಿದ್ದಾರೆ ಎಂದು ತಿಳಿದುಬಂದಿದೆ.

'ದುನಿಯಾ' ವಿಜಿ ಅಭಿನಯದ 'ಶಂಕರ್ ಐ.ಪಿ.ಎಸ್‌' ಚಿತ್ರದಲ್ಲಿ ನಟಿಸಿದ್ದ ಕ್ಯಾಥರಿನ್‌ 'ವಿಷ್ಣು' ಚಿತ್ರದಲ್ಲಿ ಅಭಿಜಿತ್‌ಗೆ ಜೋಡಿಯಾಗಿದ್ದಾರೆ. ಚಿತ್ರದ ಇತರ ಪಾತ್ರಗಳಲ್ಲಿ ಆಶಿಷ್‌ ವಿದ್ಯಾರ್ಥಿ, ಸತ್ಯಪ್ರಕಾಶ್‌, ಬುಲೆಟ್‌ ಪ್ರಕಾಶ್‌, ಗೀತಾ ಮೊದಲಾದವರಿದ್ದಾರೆ. ಮನೋಹರ್ ಛಾಯಾಗ್ರಹಣ ಮತ್ತು ಕೃಪಾಕರ್ ಸಂಗೀತ ಚಿತ್ರಕ್ಕಿದೆ. ಅಭಿಜಿತ್‌ ಪತ್ನಿ ರೋಹಿಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ