ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸುದ್ದಿ/ಗಾಸಿಪ್
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಬ್ಬಾಬ್ಬಾ ರಾಗಿಣಿ ಇದೆಂಥಾ ಚಮತ್ಕಾರ! (Ragini | Thuppa Beka Thuppa | Aindritha ray | Nidhi Subbaiah | ccl | Latest Kannada Movie News)
PR
ಸಿಸಿಎಲ್ ಕ್ರಿಕೆಟ್‌ ಲೀಗ್ ಕ್ಯಾಲೆಂಡರ್‌ಗಾಗಿ ನಟಿಯರು ಬಟ್ಟೆ ಬಿಚ್ಚಿ ಇಗೋ ನೋಡಿಕೊ ಎಂಬಂತೆ ವಿವಿಧ ಭಂಗಿಗಳಲ್ಲಿ ನಿಂತಿದ್ದು, ಕೂತಿದ್ದು ಸದ್ಯಕ್ಕೆ ಎಲ್ಲರಿಗೂ ಟಾಂ ಟಾಂ ಆಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅದಕ್ಕಿಂತ ಮತ್ತೊಂದು ವಿಶೇಷ ಅಂದರೆ ಸಿಸಿಎಲ್ ಕ್ಯಾಲೆಂಡರ್‌ನಲ್ಲಿ ದಿನಾಂಕ ನೋಡಬೇಕಿದ್ದರೆ ನೀವು ಬೂತಕನ್ನಡಿ ಹಾಕ್ಕೊಂಡು ದುರುಗುಟ್ಟಿ ನೋಡಬೇಕು. ಕನಿಷ್ಠ ಪಕ್ಷ ಕ್ಯಾಲೆಂಡರ್ ಅನ್ನೋದಕ್ಕಾದರೂ ಅಂಕಿ ಸಂಖ್ಯೆಗಳನ್ನು ಸ್ವಲ್ಪ ದೊಡ್ಡದು ಮಾಡಬಹುದಿತ್ತಲ್ಲವೇ ಎನಿಸದಿರದು.

ಹೋ.... ರಾಗಿಣಿ ವಿಷಯ ಮರೆತೋಯ್ತು. ತುಪ್ಪ ಬೇಕಾ ತುಪ್ಪಾ ಎಂದು ಜಗಮಗಿಸಿ ಜಘನ ಕುಣಿಸಿ ಪ್ರಸಿದ್ದಿ ಪಡೆದ ರಾಗಿಣಿಗೆ, ನಟಿ ಐಂದ್ರಿತಾ ರೇ ಮತ್ತು ನಿಧಿ ಸುಬ್ಬಯ್ಯ ಸಿಸಿಎಲ್ ಕ್ಯಾಲೆಂಡರ್‌ಗೆ ನೀಡಿದ ಭಂಗಿ ಇಷ್ಟವಾಗಿಲ್ಲವಂತೆ.

ಅಂದರೆ ಐಂದ್ರಿತಾ ಬಿಕಿನಿ ತೊಟ್ಟು ಬಸ್ಸಿನ ಬಾಗಿಲಲ್ಲಿ ನೇತಾಡಿದಂತೆ ಫೋಸು ಕೊಟ್ಟಿದ್ದು ಮತ್ತು ನಿಧಿ ಸುಬ್ಬಯ್ಯ ಗರ್ವದಿಂದ ಕುಳಿತದ್ದು ಇಷ್ಟವಾಗಿಲ್ಲವಂತೆ. ಅದರಲ್ಲೂ, ಸಿಸಿಎಲ್ ಕ್ಯಾಲೆಂಡರ್‌ಗಾಗಿಯೇ ಈ ರೀತಿ ಫೋಸು ನೀಡಿದ್ದು ನನಗೆ ಇಷ್ಟವಾಗಿಲ್ಲ ಎಂಬುದು ಸದ್ಯದ ಸ್ಪಷ್ಟನೆ.

ಸಿಸಿಎಲ್ ಕ್ಯಾಲೆಂಡರ್‌ಗಾಗಿ ನನಗೂ ಫೋಸು ನೀಡಬಹುದಿತ್ತು. ಆದರೆ ನೀಡಿಲ್ಲ. ನನಗೆ ಆ ರೀತಿಯೆಲ್ಲಾ ಫೋಸು ನೀಡಬೇಕಾದ ಅವಶ್ಯಕತೆಯಿಲ್ಲ ಎಂದಿದ್ದಾರೆ. ಪಾಪ ಏನೋ ಹೇಳಲು ಹೋಗಿ ಮತ್ತೇನೋ ಹೇಳುತ್ತಿರಬೇಕೇನೊ. ಸುಮ್ನೆ ವಿವಾದ ಮಾಡಬೇಡಿ. ತುಪ್ಪ ಕರಗಿ ಹೋದೀತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
WebduniaWebdunia