ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸುದ್ದಿ/ಗಾಸಿಪ್
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಗಂಡ-ಹೆಂಡತಿ' ಸಂಜನಾ ಮದುವೆ ಪ್ರಪೋಸಲ್! (Sanjana | Kannada Actress | Sagar | kho kho | Latest Kannada Movie News)
ಅಂದ್ರೆ ಸಂಜನಾ ಮದುವೆ ಮಾಡಿಕೊಳ್ಳುತ್ತಿದ್ದಾರೆ, ನೀವೂ ಪ್ರಪೋಸ್ ಮಾಡಬಹುದು ಅಂತೇನೂ ಅರ್ಥವಲ್ಲ. ಅವರಿಗೆ ಹುಡುಗರ ಕಾಟ ಜೋರಾಗ್ತಿದೆಯಂತೆ. ಇತ್ತೀಚೆಗೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಂತರವಂತೂ ಹೋದಲ್ಲೆಲ್ಲ ಮುತ್ತಿಗೆ-ಗಲಾಟೆ. ಮದುವೆ ಮಾಡಿಕೋ ಅಂತ ಹೇಳುತ್ತಿರುವವರಿಗಂತೂ ಲೆಕ್ಕವೇ ಇಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈಗ್ಗೆ ಇತ್ತೀಚೆಗಷ್ಟೇ ಯುವಕನೊಬ್ಬ ಟ್ವಿಟ್ಟರಿನಲ್ಲಿ ಮದುವೆ ಪ್ರಪೋಸಲ್ ಮುಂದಿಟ್ಟಿದ್ದನಂತೆ. ಅದೆಂತಹಾ ಹುಡುಗರಿರುತ್ತಾರೆ ನೋಡಿ. ಸಂಜನಾರಂತೂ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇಂತಹ ಅದೆಷ್ಟು ಪ್ರಪೋಸಲ್‌ಗಳು ಬರುತ್ತಿಲ್ಲ? ದೀಪಾವಳಿ ಸಂಭ್ರಮದ ಸಂದರ್ಭದಲ್ಲಿ ಇಂತಹ ಹಲವು ಸಂಗತಿಗಳನ್ನು ಅವರು ಹೇಳಿಕೊಂಡಿದ್ದರು.

ಅದೆಲ್ಲ ಏನೇ ಇರಲಿ, ಸಂಜನಾರಂತೂ ಈಗ ಬ್ಯುಸಿ ನಟಿ. ಬಹುಶಃ ಕನ್ನಡದ ಬೇರೆ ಯಾವುದೇ ನಟಿಯ ಕೈಯಲ್ಲಿ ಅಷ್ಟು ಚಿತ್ರಗಳಿಲ್ಲವೇನೋ? ಇದೇ ಶುಕ್ರವಾರ ಬಿಡುಗಡೆಯಾಗುತ್ತಿರುವ ಕೋ ಕೋ, ಫೆಬ್ರವರಿ ಮೂರರಂದು ಬಿಡುಗಡೆಯಾಗುವ ರವಿಚಂದ್ರನ್ 'ನರಸಿಂಹ', ಒಂದು ಕ್ಷಣದಲ್ಲಿ, ಸಾಗರ್, ರೆಬೆಲ್-- ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ಬಗ್ಗೆ ಸಂಜನಾ ಹೇಳುವುದಿಷ್ಟು: 2011ರ ವರ್ಷ ಸಿನಿ ಜೀವನದಲ್ಲಿ ನನಗೆ ಅತ್ಯುತ್ತಮ ವರ್ಷ. ಅದನ್ನು ಮೀರಿಸುವ ವರ್ಷ 2012 ಆಗಲಿದೆ. ನನ್ನ ಜೀವನದಲ್ಲೇ ಮರೆಯಲಾಗದ ವರ್ಷ ಇದಾಗಲಿದೆ ಅನ್ನೋ ಭರವಸೆಯಿದೆ. ದೊಡ್ಡ ದೊಡ್ಡ ನಾಯಕರು ಮತ್ತು ಜನಪ್ರಿಯ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಅಲ್ಲದೆ ಅತ್ಯುತ್ತಮ ಪಾತ್ರಗಳೂ ನನಗೆ ಸಿಗುತ್ತಿವೆ. ಗ್ಲಾಮರ್ ಪಾತ್ರಗಳ ಜತೆಗೆ ನಟನೆಗೂ ಅವಕಾಶವಿದೆ.

ಶ್ರೀನಗರ ಕಿಟ್ಟಿ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿರುವ 'ಕೋ ಕೋ'ದಲ್ಲೂ ನಟಿಸಿದ್ದೇನೆ. ಇದು ಇದೇ ವಾರ ಬಿಡುಗಡೆಯಾಗುತ್ತಿದೆ. ಇದರ ನಿರ್ದೇಶಕ ಆರ್. ಚಂದ್ರು. ಅವರು ನನ್ನ ನೆಚ್ಚಿನ ನಿರ್ದೇಶಕ. ಶಿವರಾಜ್ ಕುಮಾರ್ ನಾಯಕರಾಗಿದ್ದ ಚಂದ್ರು ಮೈಲಾರಿಯಲ್ಲೂ ನಾನು ನಟಿಸಿದ್ದೆ. ಇದೀಗ ಕೋ ಕೋ. ನಿಜಕ್ಕೂ ಖುಷಿಯಾಗುತ್ತಿದೆ.

ಕನ್ನಡದಲ್ಲಿ ಇಷ್ಟು ಚಿತ್ರಗಳಾದರೆ, ಮಲಯಾಳಂನಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿಯಂತಹವರ ಜತೆ ಸಂಜನಾ ಅಭಿನಯಿಸುತ್ತಿದ್ದಾರೆ. ಲಾಲ್ ಜತೆ 'ಕ್ಯಾಸಿನೋವಾ' ಮತ್ತು ಮಮ್ಮುಟ್ಟಿ ಜತೆ 'ಕಿಂಗ್ ಎಂಡ್ ಕಮಿಷನರ್'ನಲ್ಲಿ ಸಂಜನಾರದ್ದು ಪ್ರಮುಖ ಪಾತ್ರವಂತೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
Feedback Print