ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿಕಿತ್ಸೆ ಫಲಕಾರಿಯಾಗದೆ ನಟ ಕರಿಬಸವಯ್ಯ ವಿಧಿವಶ (Karibasavaiah | Nagthihalli Chandrashekar | Kannada Movies | Kotresi Kanasu | Latest Kannada Movie News)
ಚಿಕಿತ್ಸೆ ಫಲಕಾರಿಯಾಗದೆ ನಟ ಕರಿಬಸವಯ್ಯ ವಿಧಿವಶ
ಶನಿವಾರ, 4 ಫೆಬ್ರವರಿ 2012( 17:00 IST )
ಕೃಪೆ: ಟಿವಿ 9 ಕರ್ನಾಟಕ ಕನ್ನಡ ಚಿತ್ರರಂಗದ ಅದ್ಭುತ ನಟ ರಂಗಭೂಮಿ ಕಲಾವಿದ ಕರಿಬಸವಯ್ಯ ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಜನವರಿ 31ರ ಮುಂಜಾನೆ ಅಫಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಪ್ರಿಸ್ಟೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರಸಿದ್ಧ ಹರಿಕಥಾ ವಿದ್ವಾನ್ ಅವರ ಪುತ್ರರಾದ ಕರಿಬಸವಯ್ಯ, ಕನಕಪುರದಲ್ಲಿ ಹರಿಕಥಾ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿರುವ ವೇಳೆ ತಮ್ಮ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಉಂಡು ಹೋದ ಕೊಂಡು ಹೋದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಕರಿಬಸವಯ್ಯ, ಕೋಟ್ರೇಶಿ ಕನಸು, ಜನುಮದ ಜೋಡಿ, ಗಲಾಟೆ ಅಳಿಯಂದ್ರು, ಮುಂಗಾರಿನ ಮಿಂಚು, ಪೊಲೀಸ್ ಸ್ಟೋರಿ 2, ಉಲ್ಲಾಸ ಉತ್ಸಾಹ, ಮುಂಗಾರಿನ ಮಿಂಚು, ಯಾರಿಗೆ ಸಾಲುತ್ತೆ ಸಂಬಳ ಸೇರಿದಂತೆ ಸುಮಾರು 212 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ರಂಗಭೂಮಿಯಲ್ಲಿ ಸಾಕಷ್ಟು ಪಳಗಿ ಚಿತ್ರರಂಗ ಪ್ರವೇಶಿಸಿ ನೈಜತೆಯನ್ನು ಕಣ್ಣಿಗೆ ಕಟ್ಟಿದಂತೆ ನಟಿಸುವ ಅನುಭವಿ ನಟ ಕರಿಬಸವಯ್ಯ ಅವರ ಸಾವಿಗೆ ಚಿತ್ರರಂಗ ಸಂತಾಪ ಸೂಚಿಸಿದೆ.