ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸುದ್ದಿ/ಗಾಸಿಪ್
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಅಣ್ಣಾ ಬಾಂಡ್' ಶೂಟಿಂಗ್ ಸ್ಪೇನ್‌ನಲ್ಲೂ ಭಾರೀ ಸುದ್ದಿ! (Anna Bond | Puneet Rajkumar | Dunia Soori | Priyamani)
SUJENDRA
ಕನ್ನಡದ ಮಾಧ್ಯಮಗಳಲ್ಲೇ ಕನ್ನಡ ಸಿನಿಮಾಗಳ ಬಗ್ಗೆ ಸಮರ್ಪಕ ವರದಿಗಳು ಬರೋದಿಲ್ಲ. ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಕನ್ನಡ ಚಿತ್ರಗಳಿಗೆ ಯಾವ ಸ್ಥಾನ ಕೊಟ್ಟಿವೆ ಅನ್ನೋದು ಕಣ್ಣ ಮುಂದೆ ಇರುವಾಗಲೇ ದೂರದ ಸ್ಪೇನ್‌ನಲ್ಲಿ ಕನ್ನಡ ರಾರಾಜಿಸಿರುವ ಸುದ್ದಿ ಬಂದಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ 'ಅಣ್ಣಾ ಬಾಂಡ್' ಚಿತ್ರದ ಬಗ್ಗೆ ಪುಂಖಾನುಪುಂಖವಾಗಿ ಅಲ್ಲಿನ ಪತ್ರಿಕೆಗಳು ಬರೆದಿವೆ!

ಅವರಿಗೆ ಎಲ್ಲವೂ ಬಾಲಿವುಡ್!
ವಿದೇಶಿಗರಿಗೆ ಭಾರತೀಯ ಚಿತ್ರರಂಗವೆಂದರೆ, ಬಾಲಿವುಡ್ ಎಂದಷ್ಟೇ ಗೊತ್ತು. ಸ್ಪೇನ್ ಸಿನಿಮಾ ಎಂದರೆ ಸ್ಪಾನಿಷ್ ಭಾಷೆಯದ್ದು ಮಾತ್ರ ಎಂಬಂತೆ, ಭಾರತವೆಂದರೆ ಹಿಂದಿ ಅನ್ನೋದು ಅವರ ಅಂಬೋಣ. ಭಾರತದಲ್ಲಿ ನೂರಾರು ಭಾಷೆಗಳಿವೆ, ಹತ್ತಾರು ಚಿತ್ರರಂಗಗಳಿವೆ ಅನ್ನೋದು ಅವರಿಗೆ ಹೇಳಿದರೂ ಅರ್ಥವಾಗೋದೇ ಇಲ್ಲ.

ಅದರಂತೆ 'ಅಣ್ಣಾ ಬಾಂಡ್' ಟೀಮ್ ಚಿತ್ರೀಕರಣಕ್ಕೆ ಬಂದಿರುವುದನ್ನು ಅಲ್ಲಿನ ಮಾಧ್ಯಮಗಳು, ಬಾಲಿವುಡ್ ಸಿನಿಮಾ ಎಂದೇ ವರದಿ ಮಾಡಿವೆ. ಹಾಗೆ ಆಗಿರುವ ವರದಿಯೊಂದರ ಶೀರ್ಷಿಕೆಯನ್ನೇ ನೋಡಿ. Bollywood baila en Zaragoza con el rodaje de 'anna bond' ಎಂದರೆ, ಬಾಲಿವುಡ್‌ನ 'ಅಣ್ಣಾ ಬಾಂಡ್'ಗೆ ಝರಗೋಜಾದಲ್ಲಿ (ಸ್ಪೇನ್‌ನ ಒಂದು ನಗರ) ಹಾಡಿನ ಚಿತ್ರೀಕರಣ.
SUJENDRA


ಕೆಲವು ಪತ್ರಿಕೆಗಳಿಗೆ ಲೀಡ್ ಸುದ್ದಿ...
ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಹಾಡಿನ ಚಿತ್ರೀಕರಣಕ್ಕಾಗಿ ಸ್ಪೇನ್‌ಗೆ ಬಂದಿರುವುದನ್ನು ಕೆಲವು ಪತ್ರಿಕೆಗಳು ಪ್ರಮುಖ ಸುದ್ದಿಯಾಗಿ ಮುಖಪುಟದಲ್ಲೇ ಪ್ರಕಟಿಸಿವೆ. ಇನ್ನು ಸಾಕಷ್ಟು ಅಂತರ್ಜಾಲ ಪತ್ರಿಕೆಗಳು ಸಾಕಷ್ಟು ಭಾವಚಿತ್ರಗಳ ಸಮೇತ ವರದಿ ಮಾಡಿವೆ.

ಸೂಪರ್ ಸ್ಟಾರ್ ರಜನಿಕಾಂತ್ 'ಶಿವಾಜಿ' ಚಿತ್ರದ ಶೂಟಿಂಗ್‌ಗಾಗಿ ಇಲ್ಲಿಗೆ ಬಂದಿರುವುದನ್ನೂ ಇದೇ ಸಂದರ್ಭದಲ್ಲಿ ಪತ್ರಿಕೆಗಳು ನೆನಪು ಮಾಡಿವೆ. ಮಾರ್ಚ್ 14ರಿಂದ 16ರ ನಡುವಿನ ಪತ್ರಿಕೆಗಳಲ್ಲಿ ಈ ವರದಿಗಳು ಬಂದಿವೆ. ಪ್ರಿಯಾಮಣಿ, ನಿಧಿ ಸುಬ್ಬಯ್ಯ ನಾಯಕಿಯರಾಗಿರುವ ಈ ಚಿತ್ರ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ, ಇದಕ್ಕೆ ಸಂಗೀತ ನೀಡಿರುವುದು ಗಾಳಿಪಟ ಖ್ಯಾತಿಯ ವಿ. ಹರಿಕೃಷ್ಣ ಎಂದೂ ಪತ್ರಿಕೆಗಳು ವಿವರಿಸಿವೆ. ಕೆಲವು ಪತ್ರಿಕೆಗಳಂತೂ ನಾಯಕಿಯರನ್ನು ಕಂಡು ಮಾತನಾಡಿಸಿ, ಅವರ ಕಿರು ಸಂದರ್ಶನಗಳನ್ನೂ ಪ್ರಕಟಿಸಿವೆ.

ಭಾರತೀಯ ಚಿತ್ರರಂಗದಲ್ಲಿ ಸ್ಯಾಂಡಲ್‍‌ವುಡ್ ಇದ್ದೂ ಇಲ್ಲದಂತಿದ್ದರೂ, ವಿದೇಶದಲ್ಲಿ ಹೀಗೆ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯಲ್ಲದೆ ಮತ್ತಿನ್ನೇನು?!
ಇವನ್ನೂ ಓದಿ
Feedback Print