ದರ್ಶನ್ ಬುಲ್ ಬುಲ್ಗೆ ರಮ್ಯಾ ಬಾರ್ನಾ, ಸ್ಫೂರ್ತಿ ಬೌಲ್ಡ್

PR
ಲಕ್ಕಿ ಸ್ಟಾರ್ ರಮ್ಯಾ ಬೇಡವೆಂದ ಪಾತ್ರ ಅದೃಷ್ಟ ಪರೀಕ್ಷೆಗಿಳಿದಿರುವ ಸೀರಿಯಲ್ ಹುಡುಗಿ ರಚಿತಾ ರಾಮ್ ಪಾಲಾಯ್ತು. ಈಗ ಉಳಿದೆರಡು ಪ್ರಮುಖ ಪಾತ್ರಗಳಿಗೆ ನಿರ್ದೇಶಕ ಎಂ.ಡಿ. ಶ್ರೀಧರ್ ಇಬ್ಬರು 'ದೊಡ್ಡ' ನಟಿಯರನ್ನೇ ಆರಿಸಿದ್ದಾರೆ. ರಮ್ಯಾ ಬಾರ್ನಾ ಮತ್ತು ಸ್ಫೂರ್ತಿ ಈಗ ದರ್ಶನ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಸೀರಿಯಲ್ ನಟಿ ಎದುರು ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುವ ದರ್ದು ಈ ಹುಡುಗಿಯರಿಗೇನು ಬಂತು ಅಂತ ಯಾರಾದ್ರೂ ಕೇಳಬಹುದು. ಆದ್ರೆ ಈ ಬಗ್ಗೆ ಇವರಿಬ್ಬರೂ ಹೆಚ್ಚೇನೂ ತಲೆ ಕೆಡಿಸಿಕೊಂಡಂತಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಅಂದುಕೊಂಡು ಸ್ಟಾರ್ ನಟನ, ದೊಡ್ಡ ಬ್ಯಾನರ್‌ನ ಚಿತ್ರಕ್ಕೆ ತಲೆಯಾಡಿಸಿದ್ದಾರೆ.

ಇಲ್ಲಿ ರಮ್ಯಾ ಬಾರ್ನಾ ಅವರದ್ದು ಎರಡನೇ ನಾಯಕಿ ಪಾತ್ರ. ಡಾನ್ ಮಗಳಾಗಿ ನಾಯಕನಿಗಾಗಿ ಹಂಬಲಿಸಿ, ಆತ್ಮಹತ್ಯೆಗೆ ಯತ್ನಿಸುವ ಹುಡುಗಿ. ಆಕೆ ಮತ್ತು ಆಕೆಯ ತಂದೆ ಎಷ್ಟೇ ಪ್ರಯತ್ನಪಟ್ಟರೂ ಪ್ರೀತಿಸಿದವನು ಈಕೆಯ ಕೈಗೆ ಸಿಗುವುದಿಲ್ಲ.

ಇದೇನೂ ಚಿತ್ರದುದ್ದಕ್ಕೂ ಇರುವ ಪಾತ್ರವಲ್ಲ. ಹಾಗಿದ್ದರೂ ರಮ್ಯಾ ಬಾರ್ನಾ ಒಪ್ಪಿಕೊಂಡಿರುವುದೇಕೆ? ಇದು ಪಂಚರಂಗಿ, ಪರಮಾತ್ಮ, ಲೈಫು ಇಷ್ಟೇನೆ ಚಿತ್ರಗಳಂತೆ (ಈ ಚಿತ್ರಗಳಲ್ಲೂ ಚಿಕ್ಕ ಪಾತ್ರಗಳನ್ನೇ ರಮ್ಯಾ ಮಾಡಿದ್ದರು) ಅದೇ ಸಾಲಿನಲ್ಲಿ ಸಾಗುವ ಯಾತ್ರೆಯೇ? ಹೌದೆಂದೇ ಹೇಳಬೇಕು. ಹನಿ ಹನಿ, ನನ್ನೆದೆಯಾ ಹಾಡು, ಅನಾರ್ಕಲಿ, ಒಂದು ರೂಪಾಯಿಯಲ್ಲಿ ಎರಡು ಪ್ರೀತಿ ಮುಂತಾದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳಲ್ಲಿ ನಾಯಕಿಯಾಗುವ ಬಾರ್ನಾಗೆ ದೊಡ್ಡ ಬ್ಯಾನರುಗಳು ಕೊಡೋದು ಎರಡನೇ ನಾಯಕಿ ಅಥವಾ ತಂಗಿ ಪಾತ್ರಗಳನ್ನು!
PR

ಇನ್ನೊಬ್ಬ ಹುಡುಗಿ ಯದ್ದೂ ಇದೇ ಕಥೆ. ಆಕೆ ಇದುವರೆಗೂ ಪರಿಪೂರ್ಣ ನಾಯಕಿಯಾಗಿ ಯಾವ ಚಿತ್ರದಲ್ಲೂ ನಟಿಸಿಲ್ಲ. ಜಾಲಿಡೇಸ್, ಇದ್ರೆ ಗೋಪಿ ಬಿದ್ರೆ ಪಾಪಿ, ಬಾಡಿಗಾರ್ಡ್ ಚಿತ್ರಗಳಲ್ಲಿ ನಟಿಸಿದ ತಪ್ಪೋ ಏನೋ ಗೊತ್ತಿಲ್ಲ. ದೊಡ್ಡ ಅವಕಾಶಗಳೇ ಸಿಗುತ್ತಿಲ್ಲ. ಅದೇ ಸಾಲಿಗೆ ಸೇರುವ ಇನ್ನೊಂದು ಪಾತ್ರ ಈಗ ಸಿಕ್ಕಿರುವ 'ಬುಲ್ ಬುಲ್'. ಈ ಚಿತ್ರದಲ್ಲವರದ್ದು ದರ್ಶನ್ ತಂಗಿ ಪಾತ್ರ!

ಬಿಡಿ, 'ಬುಲ್ ಬುಲ್' ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಅಂಬರೀಷ್ ಮತ್ತು ದರ್ಶನ್ ತಂದೆ-ಮಗನಾಗಿ ನೈಸ್ ರೋಡ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗ ನಡೆಯುತ್ತಿರುವು ಚೇಸಿಂಗ್ ದೃಶ್ಯಗಳ ಚಿತ್ರೀಕರಣ, ಆಕ್ಷನ್ ದೃಶ್ಯಗಳು. ಹಾಗಾಗಿ ನಾಯಕಿಯರಿಗೆ ಸದ್ಯ ಕೆಲಸವಿಲ್ಲ.

ಉಳಿದಂತೆ ಚಿತ್ರದಲ್ಲಿ ಅಶೋಕ್, ಚಿತ್ರಾ ಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧು ಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದ ಜನಪ್ರಿಯರೇ ತುಂಬಿಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  
Widgets Magazine

ಸ್ಯಾಂಡಲ್ ವುಡ್

ಸಿನಿಮಾದವರ ಜೊತೆ ನಾ ಮದುವೆ ಆಗಲಾರೆ- ವರುಣ್ ಧವನ್

ಒಂದು ಕಡೆ ನಟಿ ಇಲಿಯಾನ ಜೊತೆ ಬೆಂಗಳೂರಿನಲ್ಲಿನ ಸ್ಟಾರ್ ಹೋಟೆಲ್ ನಲ್ಲಿ ಮಧ್ಯರಾತ್ರಿ ತನಕ ...

ಮಲ್ಲು ಚೆಲುವೆ ನವ್ಯ ರವಿಚಂದ್ರನ್ ಸಿನಿಮಾದಲ್ಲಿದ್ದಾರಾ ?

ಕನ್ನಡದಲ್ಲಿ ರವಿಚಂದ್ರ ಚಿತ್ರ ಎಂದರೆ ಸಾಕಷ್ಟು ಕುತೂಹಲಗಳು ಇದ್ದೆ ಇರುತ್ತದೆ. ಅವರು ಅಂತಹ ವಿಶೇಷತೆಗಳನ್ನು ...

ಪ್ರೀತಿ ಗೀತಿ ಇತ್ಯಾದಿ ಬಿಡುಗಡೆಯ ಹಾದಿಯಲ್ಲಿದೆ ...

'ಪ್ರೀತಿ ಗೀತಿ ಇತ್ಯಾದಿ' ಕನ್ನಡದ ಯಶಸ್ವಿ ನಿರ್ದೇಶಕ ಪವನ್ ವಡೆಯರ್ ನಟಿಸಿರುವ ಚಿತ್ರವಾಗಿದೆ. ಇದನ್ನು ...

ತಿಲಕ್ ಹೀರೋ ಆಗ್ತಿದ್ದಾರೆ...ಅವರು ಯಾವ ಪಾತ್ರದಲ್ಲಿ ...

ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದಾ ನಟ ತಿಲಕ್ ಹೆಚ್ಚು ಜನರಿಗೆ ಗೊತ್ತಾದರೂ ಎನ್ನುವುದು ಸುಳ್ಳಲ್ಲ. ಅವರು ...

Widgets Magazine

ಸಂಪಾದಕೀಯ

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ನಯನತಾರ ಇನ್ನುಮುಂದೆ ಹೈದರಾಬಾದ್ ನಲ್ಲಿ ವಾಸ ?

ನಯನತಾರ ಇನ್ನುಮುಂದೆ ಹೈದರಾಬಾದ್ ನಲ್ಲಿ

ಹೊಚ್ಚ

ಬಾಲಿವುಡ್ ಬಾದ್ಷ ಶಾರೂಖ್ ಖಾನ್ ದಕ್ಷಿಣದಲ್ಲೂ ಸಾಮ್ರಾಜ್ಯ ಸ್ಥಾಪಿಸುವ ಪ್ರಯತ್ನ?

ಬಾಲಿವುಡ್ ಬಾದ್ಷ ಅಗ್ಗಳಿಕೆ ಪಡೆದ ನಟ ಶಾರುಖ್ ಖಾನ್ ಆತ ತನ್ನ ಅಭಿನಯದ ಚಿತ್ರಗಳ ಮುಖಾಂತರ ಅಪಾರ ಸಂಖ್ಯೆಯ ...

ಅಂದು ಅನುಷ್ಕಾ ಜೊತೆ ಏನಾಯ್ತು ಗೊತ್ತೆ?

ಅಂದು ಅನುಷ್ಕಾ ಶರ್ಮ ನಟನೆಯ ಹೊಸ ಚಿತ್ರ ಎನ್ವಿಚ್ 10 . ಇದರ ಚಿತ್ರೀಕರಣ ರಾಜಸ್ತಾನದಲ್ಲಿ ನೆರವೇರುತ್ತಿದೆ. ...

Widgets Magazine
Widgets Magazine