'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಟ್ರೇಲರ್ ಮೋಡಿ

PR


ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಸುದ್ದಿ ಮಾಡುವ ಸಿನಿಮಾ ಹಾಡು-ಟ್ರೇಲರುಗಳಿಗೆ ಲೆಕ್ಕವಿಲ್ಲ. ಕೆಲವು ಮಂದಿ ತಾವೇ ಹಿಟ್ಟುಗಳನ್ನು ಕೊಟ್ಟು, ಟ್ರೇಲರ್ ಹಿಟ್ಟಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೊಳ್ಳುವವರೂ ಇದ್ದಾರೆ. ಆದರೆ ಅವೆಲ್ಲದರ ನಡುವೆ ನಿಜಕ್ಕೂ ಬ್ರೌಸಿಗರಿಗೆ ಇಷ್ಟವಾಗಿರುವ ಟ್ರೇಲರ್ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯದ್ದು.

ಸಿನಿಮಾ ಹೆಸರಿನಂತೆ ಇದು ಸಿಂಪಲ್ ಲವ್ ಸ್ಟೋರಿನೇ. ಆದರೆ ನೋಡುಗರನ್ನು ಮುದಗೊಳಿಸುತ್ತದೆ. ಮೇಕಿಂಗ್ ತುಂಬಾನೇ ಇಷ್ಟವಾಗಿ ಬಿಡುತ್ತದೆ. ಇರೋದು ಇಬ್ಬರೇ ಇಬ್ಬರು, ಒಬ್ಬ ಹುಡುಗ, ಇನ್ನೊಬ್ಬಳು ಹುಡುಗಿ. ಅವರ ನಡುವಿನ ಸರಸ ಸಲ್ಲಾಪವನ್ನೇ ಬಂಡವಾಳವನ್ನಾಗಿಸಿಕೊಂಡು, ಸುಂದರ ಲೊಕೇಷನ್ನುಗಳಲ್ಲಿ ಕಚಗುಳಿಯಿಡುವ ಸಿಂಪಲ್ ಡೈಲಾಗುಗಳನ್ನು ಹೊಡೆಸಿರುವವರು ನಿರ್ದೇಶಕ ಸುನಿಲ್ ಕುಮಾರ್.

ಸಾಮಾನ್ಯವಾಗಿ ಸಿನಿಮಾ ಟ್ರೇಲರು ಎಂದರೆ ಒಂದು ನಿಮಿಷ, ಹೆಚ್ಚೆಂದರೆ ಮೂರು ನಿಮಿಷ. ಆದರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯದ್ದು ಈ ವಿಚಾರದಲ್ಲಿ ಸಿಂಪಲ್ ಅಲ್ಲ. ಒಂದು ಶಾರ್ಟ್ ಫಿಲಂ ನೋಡಿದ ಅನುಭವವನ್ನೇ ಈ ಟ್ರೇಲರ್ ಕಟ್ಟಿ ಕೊಡುತ್ತದೆ. ನಾಯಕ ರಕ್ಷಿತ್ ಶೆಟ್ಟಿ (ತುಗ್ಲಕ್) ಮತ್ತು ನಾಯಕಿ ಶ್ವೇತಾ ಶ್ರೀವಾತ್ಸವ್ ಅಷ್ಟೂ ಹೊತ್ತು ಮೋಡಿ ಮಾಡಿ ಬಿಡುತ್ತಾರೆ.

ಟ್ರೇಲರ್ ಏನೋ ಸೂಪರ್ ಆಗಿದೆ. ಇದಕ್ಕೆ ಸಾಕ್ಷಿ, ಎರಡು ಮೂಲಗಳಿಂದ ಅಪ್ಲೋಡ್ ಆಗಿರುವ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಸಿಕ್ಕಿರುವ 'ಒದೆಗಳು'. ಜುಲೈ 16ರಿಂದ ಜುಲೈ 31ರ ನಡುವೆ ಎರಡು ಕಡೆ ಅಪ್ಲೋಡ್ ಆಗಿರುವ ಈ ಟ್ರೇಲರುಗಳಿಗೆ ಸಿಕ್ಕಿರುವ ಹಿಟ್ಟು 1.5 ಲಕ್ಷದ ಸನಿಹದಲ್ಲಿವೆ.

ಆ ಮಟ್ಟಿಗೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಗೆದ್ದಿದೆ. ಪರವೂರಿನಲ್ಲಿರುವ ಕನ್ನಡಿಗರಂತೂ ಸಿಕ್ಕಾಪಟ್ಟೆ ಮೆಚ್ಚಿದ್ದಾರೆ. ಸಿನಿಮಾ ನೋಡೇ ನೋಡ್ತೀವಿ ಅಂತ ಕಾಮೆಂಟುಗಳನ್ನು ಬೇರೆ ಹಾಕ್ತಿದ್ದಾರೆ. ಇದೇ ಭರವಸೆ ನಿರ್ದೇಶಕರಿಂದಲೂ ಸಿಕ್ಕಿದೆ. ನಾವು ಟ್ರೇಲರಿನಲ್ಲೇ ಇಷ್ಟು ಕೊಟ್ಟಿದ್ದೀವಿ, ಅಂದ್ರೆ ಸಿನಿಮಾ ಹೇಗಿರುತ್ತೆ ನೋಡಿ ಎಂದಿದ್ದಾರೆ.

ಇನ್ನು ಸಿನಿಮಾ ನೋಡುವ ಹಾಗಿರುತ್ತದೋ, ಇಲ್ಲವೋ ಗೊತ್ತಿಲ್ಲ. ಸದ್ಯ ನಿಮ್ಮಲ್ಲಿ ಹತ್ತು ನಿಮಿಷ ಟೈಮಿದ್ರೆ, ಯೂಟ್ಯೂಬ್ ಮುಂದೆ ಕಳೆಯಿರಿ. "simpallag ondh lovestory (Official HD)" ಅಂತ ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದ್ರೆ ಅದೇ ಸಿಕ್ಕಿ ಬಿಡುತ್ತೆ, ನೋಡಿ, ಎಂಜಾಯ್ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

ಸಿನಿಮಾದವರ ಜೊತೆ ನಾ ಮದುವೆ ಆಗಲಾರೆ- ವರುಣ್ ಧವನ್

ಒಂದು ಕಡೆ ನಟಿ ಇಲಿಯಾನ ಜೊತೆ ಬೆಂಗಳೂರಿನಲ್ಲಿನ ಸ್ಟಾರ್ ಹೋಟೆಲ್ ನಲ್ಲಿ ಮಧ್ಯರಾತ್ರಿ ತನಕ ...

ಮಲ್ಲು ಚೆಲುವೆ ನವ್ಯ ರವಿಚಂದ್ರನ್ ಸಿನಿಮಾದಲ್ಲಿದ್ದಾರಾ ?

ಕನ್ನಡದಲ್ಲಿ ರವಿಚಂದ್ರ ಚಿತ್ರ ಎಂದರೆ ಸಾಕಷ್ಟು ಕುತೂಹಲಗಳು ಇದ್ದೆ ಇರುತ್ತದೆ. ಅವರು ಅಂತಹ ವಿಶೇಷತೆಗಳನ್ನು ...

ಪ್ರೀತಿ ಗೀತಿ ಇತ್ಯಾದಿ ಬಿಡುಗಡೆಯ ಹಾದಿಯಲ್ಲಿದೆ ...

'ಪ್ರೀತಿ ಗೀತಿ ಇತ್ಯಾದಿ' ಕನ್ನಡದ ಯಶಸ್ವಿ ನಿರ್ದೇಶಕ ಪವನ್ ವಡೆಯರ್ ನಟಿಸಿರುವ ಚಿತ್ರವಾಗಿದೆ. ಇದನ್ನು ...

ತಿಲಕ್ ಹೀರೋ ಆಗ್ತಿದ್ದಾರೆ...ಅವರು ಯಾವ ಪಾತ್ರದಲ್ಲಿ ಮಿಂಚ್ತಾರೆ ಗೊತ್ತೇ ?

ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದಾ ನಟ ತಿಲಕ್ ಹೆಚ್ಚು ಜನರಿಗೆ ಗೊತ್ತಾದರೂ ಎನ್ನುವುದು ಸುಳ್ಳಲ್ಲ. ಅವರು ...

Widgets Magazine