ಉಪೇಂದ್ರ 'ಟೋಪಿವಾಲ'ನಿಗೆ ಪ್ರೇಕ್ಷಕರು ಸಖತ್ ಖುಷ್

PR
ರಿಯಲ್ ಸ್ಟಾರ್ ಉಪೇಂದ್ರರ 'ಟೋಪಿವಾಲ' ರಾಜಕೀಯ ವಿಡಂಬನೆಯನ್ನು ವಿಮರ್ಶಕರು ಟೀಕಿಸಿದ್ದರೂ ಪ್ರೇಕ್ಷಕರು ತಲೆ ಕೆಡಿಸಿಕೊಂಡಿಲ್ಲ. ಅದರಲ್ಲೂ ಓಪನಿಂಗ್ ದಿನವಂತೂ ರಾಜ್ಯದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆಯಂತೆ. ಮೊದಲ ಮೂರೇ ದಿನದಲ್ಲಿ 3.5 ಕೋಟಿ ರೂ. ಗಳಿಕೆ ಮಾಡಿರುವ ದಾಖಲೆಯೂ ಬಾಕ್ಸಾಫೀಸಿನಲ್ಲಿ ನಿರ್ಮಾಣವಾಗಿದೆ!

ಇತ್ತೀಚಿನ ದಿನಗಳಲ್ಲಿ ಉಪ್ಪಿಯ ಯಾವ ಸಿನಿಮಾಗಳೂ ಸಂಪೂರ್ಣವಾಗಿ ನೆಲ ಕಚ್ಚಿದ ಉದಾಹರಣೆಗಳಿಲ್ಲ. ಕಳೆದ ವರ್ಷ ಬಿಡುಗಡೆಯಾದ ನಾಲ್ಕು ಉಪ್ಪಿಯ ಚಿತ್ರಗಳಲ್ಲಿ ಯಾವುದೂ ಫ್ಲಾಪ್ ಅಲ್ಲ. ಆದರೆ ಸೂಪರ್ ಹಿಟ್ ಕೂಡ ಆಗಿಲ್ಲ. ಇದರಿಂದ ಬಚಾವ್ ಆಗಿರುವುದು ನಿರ್ಮಾಪಕರು. ಆದರೆ ಈ ವರ್ಷದ ಉಪ್ಪಿ ಮೊದಲ ಚಿತ್ರ 'ಟೋಪಿವಾಲ' ಅವರ ಇತರೆಲ್ಲ ಚಿತ್ರಗಳ ಓಪನಿಂಗ್ ದಾಖಲೆಯನ್ನು ಮುರಿದಿದೆ. ಅವೆಲ್ಲ ಚಿತ್ರಕ್ಕಿಂತ 'ಟೋಪಿವಾಲ'ದಲ್ಲಿ ಹೆಚ್ಚಿನ ಕಲೆಕ್ಷನ್ ಆಗಿರುವ ರಿಪೋರ್ಟ್ ಬಂದಿದೆ.

ಉಪ್ಪಿ ಕಥೆ-ಚಿತ್ರಕಥೆಯ, ಎಂ.ಜಿ. ಶ್ರೀನಿವಾಸ್ ಸಂಭಾಷಣೆ- ನಿರ್ದೇಶನದ 'ಟೋಪಿವಾಲ' ಚಿತ್ರದಲ್ಲಿ ಭಾವನಾ ನಾಯಕಿ. ಮೈತ್ರೇಯಾ ಮತ್ತು ಮುಕ್ತಿ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ. ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರು.

ಮೂಲಗಳ ಪ್ರಕಾರ, ಚಿತ್ರ ಬಿಡುಗಡೆಯಾದ ಮಾರ್ಚ್ 15ರಿಂದ ಮೂರು ದಿನಗಳ ಕಾಲ ಇಡೀ ಕರ್ನಾಟಕದಲ್ಲಿ ಆಗಿರುವ ಬಾಕ್ಸಾಫೀಸ್ ಸಂಗ್ರಹ 3.5 ಕೋಟಿ ರೂ. ಒಟ್ಟಾರೆ ಒಂದು ವಾರದ ಅವಧಿಯಲ್ಲಿ 5 ಕೋಟಿ ರೂ.ಗಳಿಗೂ ಹೆಚ್ಚು ದುಡ್ಡನ್ನು ಚಿತ್ರ ಬಾಚಿಕೊಂಡಿದೆ. ಇನ್ನೆರಡು ವಾರ ಚಿತ್ರ ತುಂಬಿದ ಪ್ರದರ್ಶನ ಕಂಡರೆ ಸೂಪರ್ ಹಿಟ್ ಎಂದು ಕರೆಯಬಹುದು ಎಂದು ಹೇಳಲಾಗುತ್ತಿದೆ.

ತಲೆ ಇಲ್ಲದವರಿಗಲ್ಲ ಎಂದು ಹೇಳುವ ಮೂಲಕ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದ್ದ 'ಟೋಪಿವಾಲ' ನಿರೀಕ್ಷೆ ಮುಟ್ಟಿಲ್ಲ; ಸೂಪರ್ ಚಿತ್ರದ ಮುಂದುವರಿದ ಭಾಗವೇನೋ ಎಂಬಂತೆ ಭಾಸವಾಗುತ್ತದೆ. ಚಿತ್ರಕಥೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬೆಲ್ಲ ಟೀಕೆಗಳು ವ್ಯಕ್ತವಾಗಿದ್ದವು.

ಸದ್ಯ ಉಪೇಂದ್ರ, ಶ್ರೀನಿ ಸೇರಿದಂತೆ ಚಿತ್ರತಂಡ ಪ್ರಚಾರದಲ್ಲಿ ನಿರತವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine