ಮುಖ್ಯ ಪುಟ  ಮನರಂಜನೆ  ಸ್ಯಾಂಡಲ್ ವುಡ್  ಸಿನಿಮಾ ಮುನ್ನೋಟ
 
'ಹುಡುಗಾಟ' ಶೀಘ್ರ ಬಿಡುಗಡೆ
webdunia
ಕಾಮಡಿ ಗಣೇಶ ನಾಯಕತ್ವದ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ- ಇದರ ಹೆಸರು 'ಹುಡುಗಾಟ'. ಈ ಮಧ್ಯೆ ಮನ್ಮಥ,ಚೆಲುವಿನ ಚಿತ್ತಾರ ಇತ್ಯಾದಿ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ.

ಹುಡುಗಾಟ ಸಿನಿಮಾವನ್ನು ಮಿ.ಬಕ್ರ ನಿರ್ಮಾಪಕ ಬಿ.ಜಿ.ಬಾಬು ನಿರ್ಮಿಸುತ್ತಿದ್ದಾರೆ. ಸಂಜಯ್‌ ನಿರ್ದೇಶಿಸುತ್ತಿದ್ದಾರೆ. ಹೊಸ ಚಿತ್ರ ಇನ್ನೆರಡು ವಾರದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಲಿದೆ. ಹಾಡುಗಳ ಸಂಯೋಜನೆ ಕಾರ್ಯ ಈಗ ನಡೆಯುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.

ತಾರಾಗಣದಲ್ಲಿ ಗಣೇಶ್‌, ರೇಖಾ, ಕೋಮಲ್, ಅವಿನಾಶ್‌, ಕರಿಬಸವಯ್ಯ, ಮಂಡ್ಯ ರಮೇಶ್‌, ಶೋಭರಾಜ್‌, ಸತ್ಯಜಿತ್‌ ಇದ್ದಾರೆ. ಶಅರೀಪಾದ ಮೂವೀಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ 'ಮನ್ಮಥ' ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ಜಗ್ಗೇಶ್‌ ದ್ವಿಪಾತ್ರದಲ್ಲಿರುವುದು ವಿಶೇಷ.