ಮುಖ್ಯ ಪುಟ  ಮನರಂಜನೆ  ಸ್ಯಾಂಡಲ್ ವುಡ್  ಸಿನಿಮಾ ಮುನ್ನೋಟ
 
ಇಂದು ಬಿಡುಗಡೆಯಾಗುತ್ತಿದೆ "ಪಲ್ಲಕ್ಕಿ'
webdunia
ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಕನಸಿನ ಚಿತ್ರ ಪಲ್ಲಕ್ಕಿ ಇಂದು ತೆರೆ ಕಾಣುತ್ತಿದೆ. ಯುವಕ ಯುವತಿಯರನ್ನು ಮೊದಲ ಚಿತ್ರದಲ್ಲೇ ಮೋಡಿ ಮಾಡಿದ ನಟ ಪ್ರೇಮ್‌ನನ್ನು ನೋಡಲು ಅಭಿಮಾನಿಗಳು ಇಂದು ಚಿತ್ರ ಮಂದಿರದ ಮುಂದೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇದೊಂದು ಕಾಲೇಜು ವಿದ್ಯಾರ್ಥಿಗಳ ಪ್ರೇಮ ಕತೆ. ನಾಯಕ ನಾಯಕಿಯ ಪ್ರೇಮ ಭಿಕ್ಷೆಯನ್ನು ಯಾಚಿಸುತ್ತಾ ಹಿಂದೆ ಹೋಗುತ್ತಾನೆ. ಅಂತಿಮವಾಗಿ ಆ ಪ್ರೀತಿ ನಾಯಕನಿಗೆ ಸಿಗುತ್ತದೆಯೇ ಎಂಬುದು ಸಸ್ಪೆನ್ಸ್.

ಈ ಚಿತ್ರದ ನಾಯಕಿ ಪಂಜಾಬ್ ಮೂಲದ ರಮಣಿತ ಚೌಧರಿ ವಿಭಿನ್ನವಾಗಿ ಅಭಿನಯಿಸಿದ್ದಾರೆ. ಇದು ಆಕೆಯ ಮೊದಲ ಚಿತ್ರವೂ ಹೌದು.

ಚಿತ್ರದ ಬಗ್ಗೆ ಪಲ್ಲಕ್ಕಿ ಪ್ರೇಮ್ ಹೇಳುವುದು ಹೀಗೆ :
ಅಭಿಮಾನಿಗಳು ಪಲ್ಲಕ್ಕಿ ಚಿತ್ರದ ಬಿಡುಗಡೆ ಯಾವಾಗ ಎಂದು ಕೇಳುತ್ತಿದ್ದರು ? ಅವರಿಗೆ ಚಿತ್ರದ ಹಾಡುಗಳು ಮೋಡಿಮಾಡಿವೆ. ಅವರ ನಿರೀಕ್ಷೆಯನ್ನು ಈ ಚಿತ್ರ ಹುಸಿಮಾಡಲ್ಲ. ಇದೊಂದು ಕಾಲೇಜು ಹುಡುಗ-ಹುಡುಗಿಯರ ಪ್ರೇಮಕಾವ್ಯ ಎಂದು ಚುಟುಕಿನಲ್ಲಿ ಹೇಳಿ ಮುಗಿಸುತ್ತಾರೆ. ಅಂದ ಹಾಗೆ, ಇಂದು ತೆರೆ ಕಾಣುವ ಈ ಹೊಸಬರ ಚಿತ್ರ ಶತಕ ಬಾರಿಸುತ್ತದೆಯೇ ಎಂಬ ಕುತೂಹಲ ಗಾಂಧಿ ನಗರಿಗಳಿಗಿದೆ.
ಮತ್ತಷ್ಟು
ಪುಟ್ಟಬಾಲಕಿಯ ಕನಸಿನಕೊಡೆ 'ಬ್ಲೂ ಅಂಬ್ರೆಲಾ'
ಹಗಲು ಬೆಳಕಿನಲ್ಲೆ ಎನ್‌ಕೌಂಟರ್‌ ಶೂಟ್‌ಔಚ್‌ಎಟ್‌ ಲೋಕಂಡ್ ವಾಲ
ಭರದಿಂದ ನಡೆಯುತ್ತಿದೆ ಅಪ್ಪಚ್ಚಿ ಚಿತ್ರೀಕರಣ
ಬರಲಿದೆ ಹೊಸ ಚಿತ್ರ ಶಂಭುಲಿಂಗ
ಇನ್ನೊಂದು ಚಿತ್ರದ ಸಿದ್ದತೆಯಲ್ಲಿ ಪ್ರಜ್ವಲ್
'ಹುಡುಗಾಟ' ಶೀಘ್ರ ಬಿಡುಗಡೆ