ಮುಖ್ಯ ಪುಟ  ಮನರಂಜನೆ  ಸ್ಯಾಂಡಲ್ ವುಡ್  ಸಿನಿಮಾ ಮುನ್ನೋಟ
 
ಸವಿಸವಿನೆನಪು
webdunia
ಯುವನಿರ್ದೇಶಕ ಸಂತೋಷ್ ರೈ ಪಾತಾಜೆ ನಿರ್ದೇಶನದ ಸವಿಸವಿನೆನಪು ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಸೆವೆನ್ ಓ ಕ್ಲಾಕ್ ಚಿತ್ರದ ಮುಖಾಂತರಗಾಂಧಿನಗರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ರೈ ಯುವ ಹೃದಯಗಳನ್ನು ಗಮನದಲ್ಲಿರಿಸಿಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರಂತೆ.

ಸವಿಸವಿನೆನಪಿನಲ್ಲಿ 7 ಹಾಡುಗಳಿವೆ. ಒಂದೊಂದು ಹಾಡೂ ಲೌವ್ ಗೀತೆಯೇ. ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಎರಡು ಹಾಡುಗಳನ್ನು ಬರೆದಿದ್ದಾರೆ.

ಉಳಿದ ಹಾಡುಗಳನ್ನು ಪ್ರೇಮ ಕವಿ ಕಲ್ಯಾಣ್ ಮತ್ತು ಹೃದಯ ಶಿವಹಾಡುಗಳನ್ನು ಬರೆದಿದ್ದಾರೆ. ಆರ್.ಪಿ.ಪಟ್ನಾಯಕ್ ಸಂಗೀತ ನಿರ್ದೇಶಿಸಿದ್ದಾರೆ.

ಹಿಮಾಚಲ ಪ್ರದೇಶದ ಮಲಾನಿಯಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ. ಅಲ್ಲಿನ ಇಬ್ಬನಿಯಲ್ಲಿ ಹಾಡುಗಳನ್ನು ನಿರ್ದೇಶಿಸಿಲ್ಲ. ಹಸಿರ ಪ್ರಕೃತಿಯಲ್ಲಿ ಹಾಡುಗಳನ್ನು ನಿರ್ದೇಶಿಸಿರುವುದು ಚಿತ್ರ ತಂಡಕ್ಕೆ ಹೊಸ ಹುರುಪು ನೀಡಿದೆ ಎನ್ನುತ್ತಾರೆ ಪಾತಾಜೆ.

ಈ ಚಿತ್ರದಲ್ಲಿ ಫೈಟ್ಸ್, ಅಶ್ಲೀಲ ಸಂಭಾಷಣೆ, ಎಕ್ಸೋಸಿಂಗ್ ಊಹೂಂ ಏನೂ ಇಲ್ಲ. ಇದೊಂದು ಡೀಸೆಂಟ್ ಚಿತ್ರ. ಪ್ರತಿಯೊಬ್ಬರ ಜೀವನದಲ್ಲಿ ನೆನಪುಗಳನ್ನು ಮೆಲುಕುಹಾಕುವ ಸಂದರ್ಭ. ಪ್ರೇಕ್ಷಕರು ನಮ್ಮ ಚಿತ್ರವನ್ನು ಮೆಚ್ಚುತ್ತಾರೆ ಎಂಬ ಭರವಸೆಯಿದೆ ಎನ್ನುತ್ತಾರೆ ಪಾತಾಜೆ.
ಮತ್ತಷ್ಟು
ಸೆಟ್ಟೇರುತ್ತಿದೆ ವಿಭಿನ್ನ ಪ್ರೇಮ ಕಥೆಯ "ಶಿವಾನಿ' ಚಿತ್ರ
ಇಂದು ಬಿಡುಗಡೆಯಾಗುತ್ತಿದೆ "ಪಲ್ಲಕ್ಕಿ'
ಪುಟ್ಟಬಾಲಕಿಯ ಕನಸಿನಕೊಡೆ 'ಬ್ಲೂ ಅಂಬ್ರೆಲಾ'
ಹಗಲು ಬೆಳಕಿನಲ್ಲೆ ಎನ್‌ಕೌಂಟರ್‌ ಶೂಟ್‌ಔಚ್‌ಎಟ್‌ ಲೋಕಂಡ್ ವಾಲ
ಭರದಿಂದ ನಡೆಯುತ್ತಿದೆ ಅಪ್ಪಚ್ಚಿ ಚಿತ್ರೀಕರಣ
ಬರಲಿದೆ ಹೊಸ ಚಿತ್ರ ಶಂಭುಲಿಂಗ