ಮುಖ್ಯ ಪುಟ  ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ಮುನ್ನೋಟ
 
ದೇವೇಗೌಡರ ಎದುರಾಳಿ ಈ ತಂತ್ರೇಗೌಡ!
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ರಾಜಕೀಯದ ನಾಟಕೀಯ ವಿದ್ಯಮಾನಗಳ ಪ್ರೇರಣೆಯಿಂದ ಹೊಸದೊಂದು ಚಲನಚಿತ್ರವೇ ಮೂಡಿಬರಲಿದೆ. ಅದರ ಹೆಸರು "ಮುಖ್ಯಮಂತ್ರಿ ಐ ಲವ್ ಯು"!

ವಂಶ ರಾಜಕಾರಣದ ಮೇಲೆ ಬೆಳಕು ಚೆಲ್ಲಲಿರುವ ಇದು ಬಹುತೇಕ ಕರ್ನಾಟಕದ ನಾಟಕೀಯ ವಿದ್ಯಮಾನಗಳ ಸೂತ್ರದಾರಿ ಎಂದೇ ಬಿಂಬಿಸಲ್ಪಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತಂತ್ರ-ಪ್ರತಿತಂತ್ರಗಳನ್ನೇ ಹೋಲುತ್ತದೆ. ಇಲ್ಲಿ ಅವರ ಕುಟುಂಬದ ಕುಮಾರಸ್ವಾಮಿ, ರೇವಣ್ಣ ಮುಂತಾದವರೆಲ್ಲರೂ ಬರುತ್ತಾರೆ. ಆದರೆ ಇದು ಕೇವಲ ಚಲನಚಿತ್ರವಾಗಿದ್ದು, ನಿಜ ಜೀವನದ ಪಾತ್ರಗಳಿಗೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ ಎನ್ನುವುದು ಬೆಳಗೆರೆ ಸ್ಪಷ್ಟನೆ.

ಇಲ್ಲಿ ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಹೆಣಗಾಡುವುದು ತಂತ್ರೇಗೌಡ. ಕೌಟುಂಬಿಕ ನಾಟಕ ಮತ್ತು ರಾಜಕೀಯ ವಿಡಂಬನೆಗಳ ಸಮ್ಮಿಶ್ರಣಗಳಿರುವ ಈ ಚಿತ್ರದ ರೂವಾರಿ ಪತ್ರಕರ್ತ, ಬರಹಗಾರ ರವಿ ಬೆಳಗೆರೆ.

ಕನಿಷ್ಠ ಪಕ್ಷ ದೇವೇಗೌಡರಿಗೆ ತೆರೆಯ ಮೇಲಾದರೂ "ಪ್ರತಿಸ್ಪರ್ಧಿ" ಮೂಡಿ ಬರುತ್ತಿದ್ದಾರೆ ಎಂದು ಕೊಳ್ಳೋಣವೇ?
ಮತ್ತಷ್ಟು
ಮುಖ್ಯಮಂತ್ರಿ ಐ ಲವ್ ಯೂ.
ಮತ್ತೆ ಬಂದ ಗಣೇಶ- ಸಿದ್ಧತೆ
ಸವಿಸವಿನೆನಪು
ಸೆಟ್ಟೇರುತ್ತಿದೆ ವಿಭಿನ್ನ ಪ್ರೇಮ ಕಥೆಯ "ಶಿವಾನಿ' ಚಿತ್ರ
ಇಂದು ಬಿಡುಗಡೆಯಾಗುತ್ತಿದೆ "ಪಲ್ಲಕ್ಕಿ'
ಪುಟ್ಟಬಾಲಕಿಯ ಕನಸಿನಕೊಡೆ 'ಬ್ಲೂ ಅಂಬ್ರೆಲಾ'