ಮುಖ್ಯ ಪುಟ  ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ಮುನ್ನೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೀತಿ ಏರಿಳಿತಗಳ ಬನ್ನಿ
ವಿದೇಶೀ ಸಂಸ್ಸ್ಕ್ರತಿಗಳ ನಡುವೆ ಹಬ್ಬಗಳ ಮಹತ್ವ ಕಳೆದುಹೋಗುತ್ತಿವೆ ಎಂಬುದು ಜನರ ಕೊರಗು. ಇಂದಿಗೂ ಹಬ್ಬಗಳಿಗೆ ಹಳ್ಳಿಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹಳ್ಳಿ ಸಂಸ್ಸ್ಕತಿಯಲ್ಲಿ ಶ್ರೀಮಂತಿಕೆ ಇದೆ ಎಂದು ತೋರಿಸಲು ತಯಾರಾಗುತ್ತಿರುವ ಚಿತ್ರ ಬನ್ನಿ.

ಈ ಚಿತ್ರದ ಕಥೆ ಈ ರೀತಿ ಇದೆ: ಬೆಂಗಳೂರಿನಿಂದ ಮೂವರು ಹುಡುಗರು ಉತ್ತರ ಕರ್ನಾಟಕದ ಹಳ್ಳಿಯೊಂದಕ್ಕೆ ಬರುತ್ತಾರೆ. ನಗರದ ಹುಡುಗರಿಗೆ ಹಳ್ಳಿಯ ಪರಿಸರ ವಿಸ್ಮಯಗೊಳಿಸುತ್ತದೆ. ಈ ಸಮಯದಲ್ಲಿ ಒಂದು ಹುಡುಗಿ ಪರಿಚಯವಾಗಿ ಪ್ರೀತಿ ಶುರುವಾಗುತ್ತದೆ. ನಂತರ ಅದೇ ಪ್ರೀತಿ ಹಗೆತನಕ್ಕೆ ತಿರುಗುತ್ತದೆ. ಹೀಗೆ ಬನ್ನಿ ಚಿತ್ರದಲ್ಲಿ ಪ್ರೀತಿಯ ಏರಿಳಿತಗಳಿವೆ ಎಂದು ಹೇಳುತ್ತಾರೆ ನಿರ್ದೇಶಕ ಕೊಡಚಿ ಮಹಾರುದ್ರ.

ಬೆಂಗಳೂರು ಹುಡುಗರ ಪಾತ್ರದಲ್ಲಿ ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಶ್ರೀಕಾಂತ್ ಪಾಂಡೆ ಅಭಿನಯಿಸುತ್ತಿದ್ದಾರೆ. ಅಜ್ಜನ ಪಾತ್ರದಲ್ಲಿ ಮಲ್ಲಪ್ಪ, ಮೊಮ್ಮಗಳ ಪಾತ್ರದಲ್ಲಿ ಉತ್ತರ ಕರ್ನಾಟಕದ ಕಸ್ತೂರಿ ಅಭಿನಯಿಸುತ್ತಿದ್ದಾರೆ. ಮಲ್ಲಪ್ಪ ಅವರಿಗೆ ನಾಟಕಗಳಲ್ಲಿ ಅಭಿನಯಿಸಿದ ಅನುಭವವಿದೆ.

ಬೆಂಗಳೂರಿನಲ್ಲಿ 8 ದಿನ ಚಿತ್ರೀಕರಣ ನಡೆಯಲಿದೆ. ನಂತರ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಉತ್ತರ ಕರ್ನಾಟಕದ ಸೊಗಡನ್ನು ತೋರಿಸುವುದರ ಜೊತೆಗೆ ಪ್ರೀತಿಯನ್ನು ತೋರಿಸುವ ಹಾಡುಗಳೂ ಇವೆ.
ಮತ್ತಷ್ಟು
ಪ್ರೇಮ ಕಥೆಯ ಮತ್ತೊಂದು ಚಿತ್ರ 'ಯುವ'
ದೇವೇಗೌಡರ ಎದುರಾಳಿ ಈ ತಂತ್ರೇಗೌಡ!
ಮುಖ್ಯಮಂತ್ರಿ ಐ ಲವ್ ಯೂ.
ಮತ್ತೆ ಬಂದ ಗಣೇಶ- ಸಿದ್ಧತೆ
ಸವಿಸವಿನೆನಪು
ಸೆಟ್ಟೇರುತ್ತಿದೆ ವಿಭಿನ್ನ ಪ್ರೇಮ ಕಥೆಯ "ಶಿವಾನಿ' ಚಿತ್ರ