ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ಮುನ್ನೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಂದಾಸ್
ಅಭಿಮಾನಿಗಳಲ್ಲಿ ಸಂಚಲನೆ ಉಂಟುಮಾಡಿರುವ ಬಿಂದಾಸ್
ಮಿಲನ ಚಿತ್ರದ ಅಭೂತಪೂರ್ವ ಯಶಸ್ಸನ್ನು ಬೆನ್ನಲ್ಲಿಟ್ಟುಕೊಂಡಿರುವ ಪುನೀತ್ ರಾಜ್‌ಕುಮಾರ್‌ರವರ ಬಿಂದಾಸ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸೆಂಟಿಮೆಂಟ್, ಲವ್, ಹೊಡೆದಾಟಗಳಿಂದ ಕೂಡಿರುವ ಈ ಚಿತ್ರ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ ಹಾಗೂ ಅವರ ಈವರೆಗಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಪುನೀತ್ ಅಭಿನಯಿಸಿದ್ದಾರೆ ಎಂಬುದು ಈಗಾಗಲೇ ಚಿತ್ರದ ಬಗೆಗೆ ಕೇಳಿಬರುತ್ತಿರುವ ಮಾತು.

ಗುರುಕಿರಣ್ ಸಂಗೀತದಲ್ಲಿ ಒಡಮೂಡಿರುವ ಹಾಡುಗಳ ಕ್ಯಾಸೆಟ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಬಿಸಿ ಬಿಸಿ ದೋಸೆಯಂತೆ ಖರ್ಚಾಗುತ್ತಿವೆ. ಅದರಲ್ಲೂ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಹಾಡಂತೂ ಶಾಲಾಮಕ್ಕಳ ಹಾಡಾಗಿಬಿಟ್ಟಿದೆ. ಇದೇ ಪ್ರಥಮ ಬಾರಿಗೆ ಬಾಲಿವುಡ್ ಬೆಡಗಿ ಹನ್ಸಿಕಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ಚಿತ್ರದ ಆಕರ್ಷಣೆಗಳಲ್ಲೊಂದು.

ಈ ಬಗೆಯ ಕಥೆ ರಚಿಸುವುದರಲ್ಲಿ ಜನಾರ್ದನ ಮಹರ್ಷಿಯವರದು ಎತ್ತಿದೆ ಕೈ. ಮೂಲತಃ ತೆಲುಗಿನವರಾದ ಮಹರ್ಷಿ ಇದನ್ನಾಗಲೇ ಅಲ್ಲಿ ಸಾಬೀತುಪಡಿಸಿದ್ದು, ಬಿಂದಾಸ್ ಕುರಿತು ನಿರೀಕ್ಷೆ ಹೆಚ್ಚಲು ಇದೂ ಒಂದು ಕಾರಣವಾಗಿದ್ದರೆ, ಈ ಚಿತ್ರಕ್ಕಾಗಿಯೇ ಪುನೀತ್ ರಾಜ್‌ಕುಮಾರ್ ಗಾಳಿಪಟ ಚಿತ್ರದ ಆಫರ್ ಅನ್ನು ಕೈಬಿಟ್ಟಿದ್ದು ಮತ್ತೊಂದು ಕಾರಣವಾಗಿದೆ. ಅರಸು, ಮೌರ್ಯ, ಆಕಾಶ್ ಚಿತ್ರಗಳ ಮೂಲಕ ಪಡ್ಡೆ ಹುಡುಗರಷ್ಟೇ ಅಲ್ಲದೇ ಮಹಿಳಾ ಪ್ರೇಕ್ಷಕರಿಗೂ ಪುನೀತ್ ರಾಜ್‌ಕುಮಾರ್ ಮೋಡಿಮಾಡಿದ್ದರು. ಮಿಲನ ಚಿತ್ರದ ಮೂಲಕವಂತೂ ಅವರ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅದರ ಹಾಡುಗಳು ಹುಚ್ಚು ಹಿಡಿಸುವಷ್ಟು ಚೆನ್ನಾಗಿದ್ದುದೇ ಇದಕ್ಕೆ ಕಾರಣ.

ಈ ಹಿನ್ನೆಲೆಯಲ್ಲಿ ಬಿಂದಾಸ್‌ಗೆ ಈಗ ಎಲ್ಲಿಲ್ಲದ ಹುಮ್ಮಸ್ಸು ಬಂದಿದೆ. ಹುಮ್ಮಸ್ಸು ಯಶಸ್ಸಾಗಿ ಪರಿವರ್ತನೆಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು
ಬೆಳದಿಂಗಳಾಗಿ ಬಾ
ಸತ್ಯ ಇನ್ ಲವ್
ಹೊಂಗನಸು
ಪ್ರೀತಿ ಏರಿಳಿತಗಳ ಬನ್ನಿ
ಪ್ರೇಮ ಕಥೆಯ ಮತ್ತೊಂದು ಚಿತ್ರ 'ಯುವ'
ದೇವೇಗೌಡರ ಎದುರಾಳಿ ಈ ತಂತ್ರೇಗೌಡ!