ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ಮುನ್ನೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಾಹ ಬಳಿಕದ ಗಣೇಶನ 'ಅರಮನೆ'
MOKSHA
ಚಿತ್ರ: ಅರಮನೆ

ಶ್ರೀಮಂತ ನಿರ್ಮಾಪಕ ಎಂದೇ ಖ್ಯಾತಿ ಹೊಂದಿರುವ ಗಂಡುಗಲಿ ಕೆ. ಮಂಜು ನಿರ್ಮಾಣದ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಅರಮನೆ ಚಿತ್ರ ಈ ವಾರ ತೆರೆಕಾಣುತ್ತಿದೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಈಗಾಗಲೇ ನೀರೀಕ್ಷೆ ಮೂಡಿದೆ. ಗಣೇಶ್ ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಈ ಚಿತ್ರ ಯಾವ ರೀತಿ ಓಡುತ್ತದೆ ಎಂಬುದು ಎಲ್ಲರ ಕುತೂಹಲ.

ಅರಮನೆ ಚಿತ್ರದಲ್ಲಿ ಗಣೇಶ್ ಅಭಿನಯದ ಬಗ್ಗೆ ಈಗಾಗಲೇ ಎಲ್ಲರಲ್ಲೂ ನೀರೀಕ್ಷೆ ಮೂಡಿದೆ. ಚಿತ್ರದ ಪೋಸ್ಟರ್‌ನಲ್ಲಿ ಚಾರ್ಲಿ ಚಾಪ್ಲಿನ್ ವೇಷದಲ್ಲಿ ಕಾಣಿಸಿಕೊಂಡ ಗಣೇಶ್ ಸಹಜವಾಗಿಯೇ ಜನರಲ್ಲಿ ಆಸಕ್ತಿ ಹುಟ್ಟಿಸಿದ್ದಾರೆ. ಚಿತ್ರವನ್ನು ಗಣೇಶ್ ಗೆಳೆಯ ನಾಗಶೇಖರ್ ನಿರ್ದೇಶಿಸಿದ್ದಾರೆ.

ಇಲ್ಲಿ ಮತ್ತೊಮ್ಮೆ ಅನಂತ್‌ನಾಗ್ ಹಾಗೂ ಗಣೇಶ್ ಜೋಡಿ ಒಟ್ಟಾಗಿದೆ. ಅನಂತ್‌ನಾಗ್ ಶ್ರೀಮಂತ ಕುಡುಕನ ಪಾತ್ರ ವಹಿಸಿದ್ದಾರೆ. ಇವರು ತನ್ನ ದೊಡ್ಡ ಅರಮನೆಯಂತಹ ಮನೆಯಲ್ಲಿ ಏಕಾಂಗಿಯಾಗಿ ಸದಾ ಕುಡಿಯುತಿರುತ್ತಾರೆ. ಗಣೇಶ್ ಇಲ್ಲಿ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ರೋಮಾ ನಟಿಸಿದ್ದಾರೆ.

ಚಿತ್ರದ ಮತ್ತೊಂದು ವಿಶೇಷವೆಂದರೆ ಹಿಂದೆ ಅಪೂರ್ವ ಸಹೋದರರ್ಗಳ್ ಚಿತ್ರದಲ್ಲಿ ಕಮಲಹಾಸನ್ ಮೊಣಕಾಲಿನಲ್ಲಿ ನಡೆದು ಕುಳ್ಳನ ಪಾತ್ರ ಮಾಡಿದಂತೆ ಈ ಬಾರಿ ಅರಮನೆಯಲ್ಲಿ ಗಣೇಶ್ ಕೂಡಾ ಮೊಣಕಾಲಿನಲ್ಲಿ ನಡೆದು ಕುಳ್ಳನ ಪಾತ್ರ ಮಾಡಿದ್ದಾರೆ. ಕಾಲನ್ನು ಮಡಚಿ ನಡೆಯುವುದನ್ನು ಗಣೇಶ್ ತೀರಾ ಕಷ್ಟಪಟ್ಟು ಅಭ್ಯಾಸ ಮಾಡಿದ್ದಾರಂತೆ.

ಚಿತ್ರದ ನಿರ್ದೇಶಕ ನಾಗಶೇಖರ್ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ, ಇದನ್ನು ಯಾರೂ ಮಾಡದಂತಹ ವಿಶೇಷ ಚಿತ್ರ ಎಂದು ಹೇಳಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಗಿಮಿಕ್ ಮಾಡುವುದಿಲ್ಲ. ಬದಲಾಗಿ ಎಲ್ಲರಲ್ಲೂ ಮೊಳಕೆಯೊಡೆಯುವಂತಹ ಒಂದು ಸಾಧಾರಣ ಪ್ರೇಮ ಕಥೆ. ಯಾವುದೇ ಮುಜುಗರವಿಲ್ಲದೆ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ ಎಂದರು.

ಗಣೇಶ್ ಮದುವೆಯಾದ್ದರಿಂದ ಚಿತ್ರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಗಣೇಶ್ ಮೇಲೆ ಅಭಿಮಾನ ಹೆಚ್ಚಾಗಿ ಇನ್ನಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂಬುದು ಗಣೇಶ್ ಇಮೇಜ್ ಕುರಿತು ನಾಗಶೇಖರ್‌ ಸಮಜಾಯಿಷಿ.

ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ತಾರಾ, ತೇಜಸ್ವಿನಿ ನಟಿಸಿದ್ದಾರೆ.
ಮತ್ತಷ್ಟು
ತೆರೆಗೇರಲು ಸಿದ್ಧವಿರುವ ಮೊಗ್ಗಿನ ಜಡೆ
ಸತ್ಯ ಇನ್ ಲವ್
ಮೊಗ್ಗಿನ ಮನಸು
ನಂದ ಲವ್ಸ್ ನಂದಿತಾ
ಇಂತಿ ನಿನ್ನ ಪ್ರೀತಿಯ
ಬಿಂದಾಸ್