ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » 'ವಿನಾಯಕ ಗೆಳೆಯರ ಬಳಗ' ಜುಲೈ ಎರಡನೇ ವಾರದಲ್ಲಿ ತೆರೆಗೆ (Vinayaka Geleyara Balaga | V. Nagendra Prasad | Meghana | Vijaya Raghavendra)
PR
ಸಾಹಿತಿ-ಸಂಗೀತ ನಿರ್ದೇಶಕ-ನಟ-ನಿರ್ದೇಶಕ ಹೀಗೆ ಬಹುಮುಖ ಪ್ರತಿಭಾಶಾಲಿ ಎನಿಸಿಕೊಂಡಿರುವ ವಿ.ನಾಗೇಂದ್ರ ಪ್ರಸಾದ್ 'ವಿನಾಯಕ ಗೆಳೆಯರ ಬಳಗ' ಎಂಬ ಚಿತ್ರವನ್ನು ಸಿದ್ಧಪಡಿಸಿ ತಿಂಗಳುಗಳೇ ಕಳೆದಿದ್ದು ಬಿಡುಗಡೆಗೆ ಕಾಲಕೂಡಿ ಬಂದಿರಲಿಲ್ಲ. ಈಗ ಲಭ್ಯವಾಗಿರುವ ಸುದ್ದಿಯ ಪ್ರಕಾರ ಜುಲೈ ಎರಡನೇ ವಾರದಲ್ಲಿ ಅದು ಬಿಡುಗಡೆಯಾಗಲಿದೆ.

'ನಿಮ್ಮ ಬೀದಿ ಹುಡುಗರ ಕಥೆ' ಎಂಬ ಅಡಿಬರಹವನ್ನು ಒಳಗೊಂಡಿರುವ ಈ ಚಿತ್ರವು ಚಿತ್ರರಸಿಕರನ್ನು 1985ರ ಕಾಲಘಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಿರ್ದೇಶಕರದ್ದು. ವಿಜಯ ರಾಘವೇಂದ್ರ, ಮೇಘನಾ ಗಾಂವ್ಕರ್, ಪ್ರತಾಪ್, ನವೀನ್ ಕೃಷ್ಣ ಪ್ರಧಾನ ಪಾತ್ರಗಳಲ್ಲಿರುವ ಈ ಚಿತ್ರದಲ್ಲಿ ಯುವಕ ಸಂಘಗಳ ಕುರಿತಾದ ಚಿತ್ರಣವಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ 'ನಲ್ಲ', 'ಮೇಘವೇ ಮೇಘವೇ' ಚಿತ್ರಗಳನ್ನು ನಿರ್ದೇಶಿಸಿದ ಅನುಭವ ನಾಗೇಂದ್ರ ಪ್ರಸಾದ್‌ಗೆ ಇದೆಯಾದರೂ, ಅವರು ಓರ್ವ ಯಶಸ್ವೀ ನಿರ್ದೇಶಕ ಎಂಬುದು ಇನ್ನೂ ಸಾಬೀತಾಗಿಲ್ಲ (ಆದರೆ ಗೀತರಚನೆಯ ವಿಷಯದಲ್ಲಿ ಈ ಮಾತನ್ನು ಹೇಳುವಂತಿಲ್ಲ). ಹೀಗಾಗಿ ಅವರಿಗೆ ಈ ಯಶಸ್ಸಿನ ಜರೂರತ್ತಿದೆ.

ಇನ್ನುಳಿದಂತೆ ವಿಜಯ ರಾಘವೇಂದ್ರ ಮತ್ತು ನಾಯಕಿ ಮೇಘನಾಗೂ ಈ ಚಿತ್ರದ ಯಶಸ್ಸು ಅನಿವಾರ್ಯವಾಗಿದೆ. ಏಕೆಂದರೆ ಚಿತ್ರದ ಯಶಸ್ಸಿನ ಮೇಲೆಯೇ ಹೊಸ ಅವಕಾಶಗಳು ಹುಟ್ಟಿಕೊಳ್ಳುವುದರಿಂದ ಇದು ತತ್‌ಕ್ಷಣದ ಅಗತ್ಯಗಳಲ್ಲೊಂದು. ಹೀಗಾಗಿ 'ವಿನಾಯಕ ಗೆಳೆಯರ ಬಳಗ' ಚಿತ್ರವು ಯಾರ್ಯಾರ ಯಶಸ್ಸಿಗೆ ಮುನ್ನುಡಿ ಬರೆಯಲಿದೆ ಎಂಬುದನ್ನು ಕಾದುನೋಡಬೇಕು.
ಇವನ್ನೂ ಓದಿ