ಮುಖ್ಯ ಪುಟ  ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ವಿಮರ್ಶೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರೀಕ್ಷೆ ವಿಫಲಗೊಳಿಸಿದ 'ಸಿಂಗಾಪುರದಲ್ಲಿ ಶಂಭುಲಿಂಗ'
ಕನ್ನಡ ಚಿತ್ರರಂಗದಲ್ಲಿ ಬಿ.ಆರ್.ಕೇಶವ್ ಎಂಬ ಒಬ್ಬ ನಿರ್ದೇಶಕರಿದ್ದಾರೆ. ಕೆಲವು ಕಷ್ಟಜೀವಿ ನಿರ್ದೇಶಕರು ಹಲವು ವರ್ಷಗಳಿಂದ ಉದ್ಯಮದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರೂ, ಕಷ್ಟ ಪಟ್ಟರೂ ಸಿಗದ ಚಿತ್ರ ನಿರ್ದೇಶನದ ಅವಕಾಶಗಳು ಬಿ.ಆರ್.ಕೇಶವ್ ಅವರಿಗೆ ಸಿಗುತ್ತಿರುವುದು ವಿಶ್ವದ ಎಷ್ಟನೇ ಅದ್ಬುತವೆಂಬುದನ್ನು ಅವರೊಬ್ಬರೇ ಹೇಳಬೇಕು. ಸಿಂಗಾಪುರದಲ್ಲಿ ಶಂಭುಲಿಂಗ ಎಂಬ ಇವರ ಚಿತ್ರ ಇವರ ನಿರ್ದೇಶನದ 23ನೇ ಚಿತ್ರವಂತೆ ಎಂಬ ಸಂಗತಿಯೇ ಇಷ್ಟೆಲ್ಲಾ ಉದ್ಗಾರಗಳಿಗೆ ಕಾರಣ!!

22 ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕನೊಬ್ಬನಿಂದ ಚಿತ್ರ ರಸಿಕರು ತುಂಬಾ ಮಹತ್ವದ್ದನ್ನೇ ನಿರೀಕ್ಷಿಸುತ್ತಾರೆ. 22 ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ಪುಟ್ಟಣ್ಣ ಕಣಗಾಲರಿಗೂ ಈ ನಿರೀಕ್ಷೆ ತಪ್ಪಿರಲಿಲ್ಲ. ಅದಕ್ಕೆ ತಕ್ಕಂತೆ ಪುಟ್ಟಣ್ಣನವರೂ ಸಾಕಷ್ಟು ಹೋಂವರ್ಕ್ ಮಾಡುತ್ತಿದ್ದರು ಅನ್ನಿ.

ಸದರಿ ಸಿಂಗಾಪುರದಲ್ಲಿ ಶಂಭುಲಿಂಗ ಚಿತ್ರವನ್ನು ನೋಡಿದಾಗ, ಅಂತಹ ಯಾವುದೇ ಕಾಳಜಿ ಚಿತ್ರ ನಿರ್ದೇಶಕರಿಗಿಲ್ಲದಿರುವುದು ಢಾಳಾಗಿ ಗೋಚರಿಸುತ್ತದೆ.

ಕಥಾನಾಯಕಿಗೆ ಸೇರಬೇಕಾದ 350 ಕೋಟಿ ರೂಪಾಯಿಗಳ ಆಸ್ತಿಯ ಕಾಗದ ಪತ್ರವಿರುವ ಸೂಟ್‌ಕೇಸ್ ಶಂಭು ಮತ್ತು ಲಿಂಗ ಎಂಬಿಬ್ಬರು ಸ್ನೇಹಿತರಿಗೆ ಸಿಗುತ್ತದೆ. ಇದರ ಅಪಹರಣಕ್ಕೆ ಕುಟುಂಬದ ಕೆಲವರು ಪ್ರಯತ್ನಿಸುತ್ತಾರೆ. ಸುಳಿವು ಸಿಕ್ಕ ನಾಯಕಿ ಸಿಂಗಾಪುರಕ್ಕೆ ಹೋಗುತ್ತಾಳೆ ಮತ್ತು ಶಂಭು ಮತ್ತು ಲಿಂಗರ ಬಳಿ ಸೂಟ್‌ಕೇಸ್ ಇರುವುದು ಗೊತ್ತಾಗಿ ಸಿಂಗಾಪುರಕ್ಕೇ ಅವರನ್ನು ಕರೆಸಿಕೊಳ್ಳುತ್ತಾಳೆ. ಸಿಂಗಾಪುರಕ್ಕೆ ಹೋಗಬೇಕೆನ್ನುವ ನಾಯಕರಿಬ್ಬರ ಕನಸು ಈ ಮೂಲಕ ನನಸಾದರೂ ಅವರಿಬ್ಬರೂ ಅಲ್ಲಿ ದಾರಿ ತಪ್ಪಿ ಬೇರೆಯಾಗುತ್ತಾರೆ, ಬೀದಿ ಬೀದಿಗಳಲ್ಲಿ ಅಲೆಯುತ್ತಾರೆ. ಅಲ್ಲಿ ಲಿಂಗನಿಗೆ ಮತ್ತೊಬ್ಬಳು ನಾಯಕಿ ಸಿಗುತ್ತಾಳೆ.. ಹೇಳುತ್ತಾ ಹೋದರೆ ಕಥೆ ಇನ್ನೂ ಸಾಗುತ್ತೆ ಬಿಡಿ. ಕಥೆಯಿರುವ ಚಿತ್ರದ ಕಥೆಯನ್ನೇ ವಿಮರ್ಶಕರು ಹೇಳುವಂತಿಲ್ಲ.

ಒಂದಷ್ಟು ಕಮಂಗಿ ಚೇಷ್ಟೆಯ ದೃಶ್ಯಗಳನ್ನು ಚಿತ್ರದಲ್ಲಿ ಸೇರಿಸಿಬಿಟ್ಟರೆ ಅದೇ ಹಾಸ್ಯಚಿತ್ರ ಎಂಬ ಪರಿಕಲ್ಪನೆಗಳಿಂದ ನಮ್ಮ ಚಿತ್ರರಂಗ ಯಾವಾಗ ಹೊರಬರುತ್ತದೋ ಗೊತ್ತಿಲ್ಲ. ಕಥೆ, ಚಿತ್ರಕಥೆ, ಸಂಗೀತ, ನಿರೂಪಣೆ, ಅಭಿನಯ ಎಲ್ಲದರ ಹದವಾದ ಸಮ್ಮಿಶ್ರಣವಿದ್ದಾಗ ಮಾತ್ರವೇ ಚಿತ್ರವೊಂದನ್ನು ಆಸ್ವಾದಿಸಲು ಸಾಧ್ಯ. ಇಲ್ಲದಿದ್ದರೆ 22 ಚಿತ್ರದ ನಂತರ ಇದು 23ನೆಯ ಚಿತ್ರ ಎಂದುಕೊಂಡು ನಾವೂ ಸುಮ್ಮನಿರಬೇಕಾಗುತ್ತದೆ.
ಮತ್ತಷ್ಟು
ಗಾಳಿಪಟ: ಅಭಿನಯ, ಡೈಲಾಗ್‌ನಲ್ಲಿ ಗೆದ್ದ ಗಣೇಶ
ಗಜ ಗಾಂಭೀರ್ಯದಲ್ಲಿ ದರ್ಶನ್ ಗಮ್ಮತ್ತು
ಪ್ರೀತಿಗೊಂದು ವಿಭಿನ್ನ ವ್ಯಾಖ್ಯಾನ
ಅಪ್ಪಚ್ಚಿ
ಲವಕುಶ
ಪ್ರೀತಿ ಏಕೆ ಭೂಮಿ ಮೇಲಿದೆ ಬಿಡುಗಡೆ