ಕನ್ನಡದಲ್ಲಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಎಲ್ಲರ ಮನೆಮಗಳಾಗಿ ಪ್ರತಿಯೊಬ್ಬರಲ್ಲೂ ಕಣ್ಣೀರಧಾರೆ ಹರಿಸಿದ ಚಿತ್ರನಟಿಯೆಂದರೆ ಅದು ಶ್ರುತಿ ಅಲ್ಲದೆ ಬೇರಾರು ಇರಲಾರರು. ಭಾವುಕ ದೃಶ್ಯಗಳಲ್ಲಿ ನಟಿಸಲು ಶ್ರುತಿ ಎತ್ತಿದ ಕೈ. ಗಂಡನಿಂದ ಮೋಸ ಹೋದಾಗ ಸೋಲು, ಮನೆಯಿಂದ ತಿರಸ್ಕೃತಳಾಗುವ ಅಬಲೆ ಹೆಣ್ಣು, ಅಣ್ಣತಂಗಿಯ ಸೆಂಟಿಮೆಂಟ್, ವರದಕ್ಷಿಣೆಯ ಕಿರುಕುಳ ತಾಳಲಾರದೆ ರೋಸಿಹೋದ ದುಃಖ ತಪ್ತ ಹೆಣ್ಣು.... ಹೀಗೆ ಒಂದೇ ಎರಡೇ... ಶ್ರುತಿ ನಟಿಸಿದ ಪಾತ್ರಗಳೆಲ್ಲವೂ ಹೆಣ್ಣಿನ ಮನದಾಳದ ತಾಕಲಾಟಗಳು, ಹೆಣ್ಣಿನ ಮೇಲ ಪುರುಷ ಶಕ್ತಿಯ ಅಟ್ಟಹಾಸಗಳೇ ಮೇಳೈಸುವ ಚಿತ್ರಗಳು. ಇಂತಿಪ್ಪ ಕಣ್ಣೀರ ಸುಂದರಿ ಶ್ರುತಿಗೆ ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮ. | Shruthi, Chandrachud, Chakravarthy, Akka Thangi, Awwa