ಕಡ್ಡಿಪುಡಿ ಸಿನಿಮಾ ವಿಮರ್ಶೆ: ಕ್ಲಾಸ್-ಮಾಸ್ ಸೂಪರ್ ಬೆರಕೆ

ಶನಿವಾರ, 8 ಜೂನ್ 2013 (14:54 IST)

PR
ಕಡ್ಡಿಪುಡಿ' ಸುದೀರ್ಘ ಸಿನಿಮಾ. ಹಾಗಾಗಿ ಕೆಲವೆಡೆ ಸೂರಿ ಎಳೆದಾಡಿದ್ದಾರೆ ಎಂಬ ಭಾವನೆ ಬರುತ್ತದೆ. ಆಗೆಲ್ಲ ಇನ್ನೊಂದು ದೃಶ್ಯ ಚಕ್ಕನೆ ಬಂದು ತಿರುವು ನೀಡುತ್ತದೆ. ಹಾಗಾಗಿ ಎಲ್ಲೂ ಮಿಸ್ ಮಾಡಬೇಕಾದ ದೃಶ್ಯಗಳು ಇವೆ ಎಂದೆನಿಸುವುದಿಲ್ಲ. ತನ್ನದೇ ಧಾಟಿಯಲ್ಲಿ, ಗೆಲುವಿನ ಹಾದಿಯಲ್ಲಿ ಹೋಗಿರುವ ಸೂರಿ ಯಾರನ್ನೂ ಮೆಚ್ಚಿಸಲು ಹೊರಟಿಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ. ಅದೇ ರೌಡಿಸಂ ಕಥೆಯಾದರೂ, ಬೇರೆ ದೃಷ್ಟಿಯಲ್ಲಿ ನೋಡಿದ್ದಾರೆ. ಬೇರೆಯದೇ ಟಚ್ ನೀಡಿದ್ದಾರೆ. ಹೊಡೆಬಡಿ ಬದುಕಿನ ಇನ್ನೊಂದು ಮುಖ ತೋರಿಸಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಇನ್ನೊಂದು ಮಾತೇ ಇಲ್ಲ. ರಾಧಿಕಾ ಪಂಡಿತ್ ಸಹಜಾಭಿನಯವನ್ನು ನೋಡಿಯೇ ಹೇಳಬೇಕು. ರಂಗಾಯಣ ರಘು ಅವರದ್ದು ವಿಶಿಷ್ಟ ಪಾತ್ರ. ಐಂದ್ರಿತಾ ರೇ ಬೆತ್ತಲೆ ಬೆನ್ನಿಗೆ ಎಲ್ಲೂ ಸಮರ್ಥನೆ ಸಿಗುವುದಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಕಾಣೆಯಾಗಿರುವ ಮ್ಯಾಜಿಕನ್ನು ಛಾಯಾಗ್ರಾಹಕ ಕೃಷ್ಣ ಅಲ್ಲಲ್ಲಿ ಸರಿ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ರೌಡಿಸಂ ಚಿತ್ರಗಳ ಮೂಲ ಉಪೇಂದ್ರ ನಿರ್ದೇಶನದ ಓಂ. ಆ ಚಿತ್ರದ ಅಂತ್ಯದಿಂದ ಸೂರಿ ನಿರ್ದೇಶನದ ಕಡ್ಡಿಪುಡಿ ಆರಂಭ. ಒಂದಷ್ಟು ಬೇರೆ ಚಿತ್ರಗಳನ್ನೂ ನೆನಪಿಸುತ್ತಾ ಹೋಗುವ 'ಕಡ್ಡಿಪುಡಿ' ಒಂದಲ್ಲ, ಎರಡು ಬಾರಿ ನೋಡಬಹುದಾದ ಚಿತ್ರ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine