PTI ನಿಮ್ಮ ಮುಖದಷ್ಟೇ ಕೈ, ಉಗುರುಗಳಿಗೂ ಪ್ರಾಮುಖ್ಯತೆ ನೀಡುವುದು ಸೌಂದರ್ಯದ ದೃಷ್ಠಿಯಿಂದಲೂ ಆರೋಗ್ಯದ ದೃಷ್ಠಿಯಿಂದಲೂ ಅಗತ್ಯ. ಇದಲ್ಲದೇ ದಣಿದ ಕೈಗಳಿಗೆ ಒಂದಿಷ್ಟು ಆರೈಕೆ, ಮಾಲೀಸು ಕೈಗಳಿಗೆ ಮತ್ತು ಉಗುರಿಗೆ ಆರಾಮ ನೀಡುತ್ತದೆ.ಇದು ವೇಗದ ಜಗತ್ತು. ಸದಾಕಾಲ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿರುವ ಕಾರಣ ಆಧುನಿಕ ಮಹಿಳೆಗೆ ಸೌಂದರ್ಯಗಾರಗಳಿಗೆ ತೆರಳಲು ಸಮಯದ್ದೇ ಸಮಸ್ಯೆ.ಅಂತಹ ಮಹಿಳೆಯರು ಮನೆಯಲ್ಲೇ ಕಡಿಮೆ ವೆಚ್ಚದಲ್ಲಿ ಸ್ವಯಂ ಮ್ಯಾನಿಕ್ಯೂರ್ ಮಾಡಿಕೊಳ್ಳಬಹುದು. ಮನೆಯಲ್ಲೆ ಮ್ಯಾನಿಕ್ಯೂರ್ ಮಾಡುವ ವಿಧಾನ ಹೀಗಿದೆ.ಮೊದಲಿಗೆ ಉಗುರಿನಲ್ಲಿರುವ ನೇಲ್‌ಪಾಲಿಶನ್ನು