ಗರ್ಭಿಣಿ ಸ್ತ್ರೀಯರು ಧೂಮಪಾನದಲ್ಲಿ ನಿರತರಾಗುವುದರಿಂದ ಅವರಿಗೆ ಜನಿಸುವ ಹೆಣ್ಣುಮಕ್ಕಳ ಸಂತಾನ ಶಕ್ತಿ ಕುಂದುತ್ತದೆಂದು ಸಂಶೋಧನೆಯಿಂದ ಸಾಬೀತಾಗಿದೆ. ಕೆನಡಾದ ಟೊರೆಂಟೊ ವಿವಿಯ ಸಂಶೋಧಕರು ಇಲಿಯನ್ನು ಮಾದರಿಯಾಗಿ ಇಟ್ಟುಕೊಂಡು ಅಧ್ಯಯನ ನಡೆಸಿದರು.ಸಂಶೋಧನೆಯ ಭಾಗವಾಗಿ ಸಿಗರೇಟ್ ಹೊಗೆಯಲ್ಲಿರುವ ಪರಿಸರ ವಿಷಕಾರಿ ವಸ್ತುವಾದ ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ನ್ನು(ಪಿಎಎಚ್) ಹೆಣ್ಣು ಇಲಿಯ ಚರ್ಮದೊಳಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು. ತಾಯಿ ಇಲಿ ಮಾಮೂಲಿ ಗಾತ್ರದ ಮರಿಗಳಿಗೆ ಜನ್ಮನೀಡಿದರೂ ಸಹ ಅದರ ಹೆಣ್ಣುಮರಿಗಳ ಸಂತಾನ ಶಕ್ತಿ ಕುಂದಿರುವುದು ಕಂಡುಬಂತು. ಹೆಣ್ಣುಮರಿಗಳಲ್ಲಿ