ಸ್ನೇಹಾND ಯಾವ ಅಮ್ಮನಿಗೆ ತನ್ನ ಮಗಳು ಚೆನ್ನಾಗಿರಬೇಕೆಂಬ ಇಚ್ಛೆ ಇರವುದಿಲ್ಲ? ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬುದು ಹಳೆಯ ಗಾದೆ. ಅದೂ ಹೆಗ್ಗಣವಾಗಿದ್ದರೂ ಮುದ್ದುಮುದ್ದು ಹೆಗ್ಗಣವಾಗಿರಲಿ ಎಂಬುದಾಗಿ ಯಾವ ತಾಯಿ ಬಯಸದಿರುವುದಿಲ್ಲ?ನಿಮ್ಮ ಅಥವಾ ನಿಮ್ಮ ಮಗಳ ಮುಖ ಸೌಂದರ್ಯ, ಇಲ್ಲವೇ ಚರ್ಮದ ಬಣ್ಣ ಮುಂತಾದ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ ಎಂಬುದನ್ನು ಗಮನಿಸಿ. ಮುಖಕ್ಕೆ ಪೌಡರ್, ಕ್ರೀಂ ಬಳಿಯುವುದು, ಕೇಶವಿನ್ಯಾಸಕ್ಕೆ ಒಂದಷ್ಟು ಹೊತ್ತು ವಿನಿಯೋಗಿಸಿ ದುಬಾರಿ ಉಡುಪು