PR ನೀವು ತೆಗೆದುಕೊಳ್ಳುವ ಆಹಾರವು ನಿಮ್ಮ ಮುಖದಲ್ಲಿ ಪ್ರತಿಬಿಂಬಿತವಾಗುವುದರಿಂದ ಹಣ್ಣು ಹಾಗೂ ತರಕಾರಿಗಳನ್ನು ನಿಮ್ಮ ಆರೋಗ್ಯಕ್ಕಾಗಿ ಹಾಗೂ ಹೊಳೆಯುವ ಚರ್ಮಕ್ಕಾಗಿ ಬಳಸುವುದು ತುಂಬಾ ಅವಶ್ಯಕ. ದೇಹದ ಮೆಟಬೋಲಿಸಮ್ನ ಚಟುವಟಿಕೆಗೆ ಹಣ್ಣುಗಳು ಮತ್ತು ತರಕಾರಿಗಳು ಸಹಕಾರಿ ಅಲ್ಲದೆ ಇವುಗಳು ಮನುಷ್ಯನು ಆರೋಗ್ಯವಾಗಿರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಳೆಯುವ ಚರ್ಮಕ್ಕಾಗಿ ನಿಮ್ಮ ಆಹಾರವು ಮಿನರಲ್ಸ್ ಹಾಗೂ ವಿಟಮಿನ್ಗಳಾದ ಎ,ಸಿ ಹಾಗೂ ಇ ಗಳನ್ನು ಯಥೇಚ್ಛವಾಗಿ ಒಳಗೊಂಡಿರಲೇಬೇಕು. ನೀವು ತೆಗೆದುಕೊಳ್ಳುವ ಹಣ್ಣುಗಳನ್ನು ಹಾಗೂ ಕೆಲವೊಂದು