ಮುಖ್ಯ ಪುಟ  ವಿವಿಧ  ಸೌಂದರ್ಯ  ಟಿಪ್ಸ್‌
 
ಕಣ್ಣುಗಳ ಮೇಕಪ್
webdunia
EYE
PTI
ಅದು ಕಡುಕಪ್ಪಿರಬಹುದು, ಕಂದು ಬಣ್ಣದ್ದಾಗಿರಬಹುದು, ಹಸಿರು, ನೀಲಿ ಇಲ್ಲವೇ ಮಸುಕಿನ ಬಣ್ಣದ ಕಣ್ಣಿರಬಹುದು. ಕಣ್ಣುಗಳು ಆತ್ಮದ ಕನ್ನಡಿ ಇದ್ದಂತೆ. ಒಂದೇ ಒಂದು ನೋಟ ಅನೇಕ ಸಂದೇಶಗಳನ್ನು ನೀಡುತ್ತದೆ.

ವ್ಯಕ್ತಿಯ ವ್ಯಕ್ತಿತ್ವ ಮತ್ತು ಭಾವನೆಗಳನ್ನು ನೋಟದ ವಿನಿಮಯದಿಂದಲೇ ಅರಿತುಕೊಳ್ಳಬಹುದು. ಸಂತೋಷ, ದುಃಖ, ಖೇದ, ತುಂಟತನ, ವಿಸ್ಮಯತೆ ಎಲ್ಲವುಗಳ ಪ್ರತಿಬಿಂಬ ಕಣ್ಣುಗಳು ಎಂದರೆ ತಪ್ಪಾಗುತ್ತಾ? ಇಲ್ಲವಲ್ಲ.

ಸೃಷ್ಠಿನೀಡಿದ ಈ ಕಣ್ಣುಗಳನ್ನು ಇನ್ನಷ್ಟು ಆಕರ್ಷಕವಾಗಿ, ಮಾದಕವಾಗಿ ಕಾಣುವಂತೆ ಮಾಡುವುದು ನಮ್ಮ ಕೈಯಲ್ಲಿದೆ.ಮಸ್ಕರಾ, ಐಶಾಡೋ, ಐಲೈನರ್ ಇವಿಷ್ಟು ನಿಮ್ಮ ಕಣ್ಣುಗಳನ್ನು ಇತರರ ಕಣ್ಣುಗಳಿಗೆ ಆಕರ್ಷಣೀಯವಾಗಿಸಬಹುದು. ಕೆಲವೊಮ್ಮೆ ಕಾಂಪಾಕ್ಟ್ ಪೌಡರ್, ತೆಳುವಾದ ಫೌಂಡೇಶನ್ ಕೂಡ ಕಣ್ಣಕೆಳಗಿನ ಉಂಗುರಗಳು ಕಾಣದಂತೆ ಮಾಡಲು ಸಹಾಯಕವಾಗುತ್ತವೆ.

ಮುಖದ ಮೇಕಪ್ ಮಾಡುವ ವೇಳೆಗೆ ಉಡುಪಿನ ಬಣ್ಣದ ಐಶಾಡೂವನ್ನು ಹುಬ್ಬುಗಳ ಕೆಳಗೆ, ಕಣ್ಣಿನ ರೆಪ್ಪೆಗಳ ಮೇಲೆ ತೆಳುವಾಗಿ ಲೇಪಿಸಿ. ಬಳಿಕ ಐ ಲೈನರ್ ಹಚ್ಚಿರಿ. ಕೊನೆಯಲ್ಲಿ ರೆಪ್ಪೆಯ ಕೂದಲುಗಳಿಗೆ ಮಸ್ಕರಾ ಬಳಸಿ. ಇವ್ಯಾವುದೂ ಕಣ್ಣಿನ ಒಳಗೆ ಹೋಗದಂತೆ ಜಾಗೃತೆ ವಹಿಸಿ.