ಮುಳ್ಳು ಸೌತೆಯನ್ನು ಓಲೆಯಾಕಾರವಾಗಿ ಕತ್ತರಿಸಿ ಅದನ್ನು ಕಣ್ಣುಗಳ ಮೇಲಿರಿಸಿ ಹಾಗೇ ಹತ್ತು ನಿಮಿಷಗಳ ಕಾಲ ಕಣ್ಣುಮುಚ್ಚಿರಿ. ಇದೇ ರೀತಿಯಾಗಿ ಆಲೂಗಡ್ಡೆಯನ್ನೂ ಇರಿಸಬಹುದು.
ಪನ್ನೀರಲ್ಲಿ ಹತ್ತಿಯನ್ನು ಅದ್ದಿ ಕಣ್ಣಮೇಲಿರಿಸಿ ಸ್ವಲ್ಪ ಹೊತ್ತು ಕಣ್ಣುಮುಚ್ಚಿ. ರಾತ್ರಿ ಮಲಗುವ ವೇಳೆ ಹರಳೆಣ್ಣೆಯನ್ನು ಕಣ್ಣ ರೆಪ್ಪೆಗಳಿಗೆ ಲೇಪಿಸಿ. ಮನೆಯಲ್ಲೇ ತಯಾರಿಸಿದ ಶುದ್ಧ ಕಾಡಿಗೆಯೂ ಕಣ್ಣುಗಳ ಶುಭ್ರತೆಗೆ ಸಹಾಯಕ.
ಅಗಲ ಪಾತ್ರೆಯಲ್ಲಿ ಶುದ್ಧವಾದ ನೀರು ತೆಗೆದುಕೊಂಡು ಆ ನೀರಿನಲ್ಲಿ ಕಣ್ಣುಗಳನ್ನಿಡಿ. ಕಣ್ಣುಗಳಿಗೆ ಸಂಬಂಧಿಸಿದ ಚಿಕ್ಕಪುಟ್ಟ ವ್ಯಾಯಾಮಗಳನ್ನು ಮಾಡಿ.
ಆಹಾರದಲ್ಲಿ ಸೊಪ್ಪು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಿ. ಪಪ್ಪಾಯದಂತಹ ಕೇಸರಿ ಬಣ್ಣದ ಹಣ್ಣುಗಳು ಕಣ್ಣುಗಳಿಗೆ ಉತ್ತಮ.
|