ಮುಖ್ಯ ಪುಟ  ವಿವಿಧ > ಸೌಂದರ್ಯ > ಟಿಪ್ಸ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಗಂಧದ್ರವ್ಯ ಖರೀದಿಯ ಮುನ್ನ...
ರಜನಿ ಭಟ್

ಸುಗಂಧದ್ರವ್ಯ ಬಳಕೆಯತ್ತ ಇಂದಿನ ಜನಾಂಗವು ಹೆಚ್ಚು ಒಲವು ತೋರುತ್ತಿದ್ದು ಇದಕ್ಕೆ ಪೂರಕವಾಗಿ ವಿವಿಧ ನಮೂನೆಯ ಪರ್ಫ್ಯೂಮ್‌ಗಳು ದೊರೆಯುತ್ತವೆ. ಆದರೆ ಅನೇಕರು ಖರೀದಿ ಮಾಡುವ ವೇಳೆ ಅಂಗಡಿಗಳಲ್ಲಿರುವ ವಿಭಿನ ರೀತಿಯ ಅನೇಕ ರೀತಿಯ ಪರ್ಫ್ಯೂಮ್‌ಗಳಲ್ಲಿ ಯಾವುದನ್ನು ಖರೀದಿಸಬೇಕು ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತಾರೆ. ಉತ್ತಮ ಸುಗಂಧದ್ರವ್ಯ ಖರೀದಿಗಾಗಿ ಕೆಲವು ಸಲಹೆಗಳು-

1.ಸುಗಂಧದ್ರವ್ಯಗಳನ್ನು ಖರೀದಿಸುವ ಮೊದಲು ನಿಮ್ಮ ದೇಹಕ್ಕೆ ಸಿಂಪಡಿಸಿ ಅದರ ಸುವಾಸನೆಯು ನಿಮಗೆ ಇಷ್ಟವಾಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.ಪ್ರಯತ್ನಿಸಿ ನೋಡದೆ ಖರೀದಿಸಬೇಡಿ.
2. ಆಯ್ಕೆ ಮಾಡುವಾಗ ಮೂರಕ್ಕಿಂತ ಹೆಚ್ಚು ಸುಗಂಧದ್ರವ್ಯಗಳನ್ನು ಪರೀಕ್ಷಿಸಬೇಡಿ ಯಾಕೆಂದರೆ ಹೆಚ್ಚು ಪರ್ಫ್ಯೂಮ್‌ಗಳ ಪರಿಮಳದ ನಡುವೆ
ಒಂದಕ್ಕೊಂದರ ನಡುವಿನ ವ್ಯತ್ಯಾಸವನ್ನು ಅರಿಯಲು ನಿಮ್ಮ ಮೂಗು ಅಸಮರ್ಥವಾಗಬಹುದು.
3. ಸಂಗಂಧ ದ್ರವ್ಯದ ಅಸಲಿ ಪರಿಮಳವು ಹತ್ತು ನಿಮಿಷಗಳ ನಂತರವೇ ಗೊತ್ತಾಗುವುದರಿಂದ ಆಯ್ಕೆ ಮಾಡುವ ವೇಳೆಯಲ್ಲಿ ಹತ್ತು ನಿಮಿಷ ಸಮಯಾವಕಾಶ ನೀಡಿ.
4. ಅತ್ಯಂತ ಕಡು ಸುವಾಸನೆಯ ಸುಗಂಧದ್ರವ್ಯಗಳನ್ನು ಖರೀದಿಸಬೇಡಿ.
5. ಸುಗಂಧದ್ರವ್ಯದ ಪರಿಮಳವು ಕೆಲವರಿಗೆ ತಲೆನೋವು ಉಂಟಾಗುವುದರಿಂದ ಅಗತ್ಯಕ್ಕಿಂತ ಹೆಚ್ಚು ಪ್ರಫ್ಯೂಮನ್ನು ಸಿಂಪಡಿಕೊಳ್ಳಬೇಡಿ.
6. ಖರೀದಿಸುವ ಸಮಯದಲ್ಲಿ ಅವಧಿ ಅಂತ್ಯದ ಸಮಯವನ್ನು ಸರಿಯಾಗಿ ಪರೀಕ್ಷಿಸಿ ಖರೀದಿಸಿ.
ಮತ್ತಷ್ಟು
ಚರ್ಮದ ರಕ್ಷಣೆ - ಒಂದಷ್ಟು ಸಲಹೆಗಳು
ಮುಖಸೌಂದರ್ಯ ವೃದ್ಧಿಗೆ ತರಕಾರಿ
ಕಣ್ಣುಗಳ ಮೇಕಪ್
ಮೊಡವೆ ಬಿಸಿಲು ಹುಣ್ಣಿನಿಂದ ರಕ್ಷೆ