ರಶ್ಮಿ ಪೈ ಮುಖದ ಸೌಂದರ್ಯ ವರ್ಧಿಸುವುದರಲ್ಲಿ ಹುಬ್ಬುಗಳ ಪಾತ್ರ ಇದ್ದೇ ಇದೆ. ಬಿಲ್ಲಿನಂತೆ ಬಾಗಿದ ಹುಬ್ಬುಗಳು ಬಾಣದಂತಹ ನೋಟಕ್ಕೆ ಸಹಾಯಕವಾಗುತ್ತವೆ. ಹುಬ್ಬುಗಳು ಕಣ್ಣಿನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೆತ್ತಿಯಿಂದ ಸುರಿಯುವ ಬೆವರಿನಿಂದಲೂ ಇನ್ನಿತರ ಪರಕೀಯ ವಸ್ತುಗಳಿಂದಲೂ ಕಣ್ಣನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಕಣ್ಣಿನ ಸೌಂದರ್ಯವನ್ನು ವರ್ಧಿಸಬೇಕಾದರೆ ಹುಬ್ಬುಗಳನ್ನು ಅಂದವಾಗಿರಿಸ ಬೇಕಾದುದು ಬಹು ಮುಖ್ಯ. ಕೆಲವರಿಗೆ ನೈಸರ್ಗಿಕವಾಗಿ ಹುಬ್ಬುಗಳು ಮುಖಕ್ಕೆ ಹೊಂದುವ ಆಕಾರದಲ್ಲಿದ್ದರೂ ಇನ್ನಿತರರಿಗೆ ಹುಬ್ಬನ್ನು ತಾವು ಇಚ್ಛಿಸುವ ಆಕಾರಕ್ಕೆ ಪರಿವರ್ತಿಸಲು