NRB ದಸರಾ ಹಬ್ಬ ಮೈಸೂರು ಸೇರಿದಂತೆ ಭಾರತದ ಉತ್ತರ ಭಾಗಗಳಲ್ಲಿಯೂ ದುರ್ಗಾಪೂಜೆಯನ್ನು ಆಚರಿಸುವ ಮೂಲಕ ನಡೆಸಲಾಗುತ್ತದೆ. ಒಂಬತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂಬುದಾಗಿಯೂ ಕರೆಯಲಾಗುತ್ತದೆ.ಆಯುಧಪೂಜೆ, ವಿಜಯದಶಮಿಗಳನ್ನೊಳಗೊಂಡ ಹಲವು ಹಬ್ಬದಾಚರಣೆ ಮೈಸೂರು ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂಬುದೇ ವಿಶೇಷವಾಗಿದೆ.ಪುರಾಣ:ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿಯನ್ನು ಧಮನಿಸಿದ ಶ್ರೀರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ