PTI ಅವಿನಾಶ್ ಬಿ. ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ ಹಚ್ಚುವುದು, ಪರಸ್ಪರ ಕೈಜೋಡಿಸಿ ಭ್ರಾತೃತ್ವ ಮೆರೆಯುವುದು, ಅನೇಕತೆಯಲ್ಲಿ ಏಕತೆ ಮೆರೆಯುವುದರ ಸಂಕೇತವೂ ಹೌದು.ಈ ಶುಭ ಸಂದರ್ಭದಲ್ಲಿ ಕನ್ನಡ ವೆಬ್ದುನಿಯಾದ ಓದುಗರೆಲ್ಲರಿಗೂ ಬೆಳಕಿನ ಆವಳಿಯ ಹಬ್ಬದ ವಿಶೇಷ ಶುಭ ಆಶಯಗಳ ಸಾಲುಗಳು ಇಲ್ಲಿವೆ:ದಿವಾಳಿ ಶುಭಾಶಯ ಬೇಡ ದೀಪಾವಳಿಯ ಶುಭಾಶಯಗಳಿರಲಿ