ನೀರಿನ ಬಗ್ಗೆ ನಿರ್ಲಕ್ಷ್ಯವಹಿಸುವುದು ಹಾಗೂ ಅದನ್ನು ಪೋಲುಮಾಡುವುದು ನಮ್ಮಲ್ಲಿ ಸಾಮಾನ್ಯ ದೃಶ್ಯ. ಆದರೆ ಮಾನವನ ದೇಹಕ್ಕೆ ಪ್ರಮುಖವಾಗಿ ಬೇಕಿರುವ ಜೀವಾಂಶ ನೀರು ಎಂಬುದನ್ನು ನಾವು ಮರೆತಿರುತ್ತೇವೆ.ನೀರು ದೇಹದ ಬಾಹ್ಯ ಅಂಗಗಳನ್ನು ಸ್ವಚ್ಛವಾಗಿಡುವುದರೊಂದಿಗೆ ಒಳಗಿನ ಅಂಗಗಳನ್ನು ಪುನಃಶ್ಚೇತನಗೊಳಿಸುತ್ತದೆ. ದೇಹದೊಳಗಿನ ಕಶ್ಮಲಗಳನ್ನು ಹೊರಹಾಕಲು ದೇಹದಲ್ಲಿರುವ ಪ್ರಮುಖ ಮಾಧ್ಯಮ ನೀರು. ನೀರಿನೊಂದಿಗೆ ಸೋಸಿ ಕಶ್ಮಲಗಳನ್ನು ದೇಹ ಹೊರ ವಿಸರ್ಜಿಸುತ್ತದೆ.ನೀರಿನ ಕೊರತೆಯಿಂದ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು. ವಾಂತಿ ಬೇಧಿಯಿಂದಾಗಿ ಸಂಭವಿಸುವ ಮರಣಗಳು ನೀರು ಹಾಗೂ