PTI ನಾಲ್ಕುಕೈ, ನಾಲ್ಕು ಕಾಲುಗಳುಳ್ಳ ಎರಡು ವರ್ಷ ಪ್ರಾಯದ ಬಾಲಕಿಯೊಬ್ಬಾಕೆಯ ಜನ್ಮಜಾತ ವೈಕಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ 40 ಗಂಟೆಗಳ ಅವಿರತ ಶಸ್ತ್ರಚಿಕಿತ್ಸೆ ಕಾರ್ಯವು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದು, ಮಗುವಿನ ಬೆನ್ನು ಹುರಿಯನ್ನು ಯಶಸ್ವಿಯಾಗಿ ಪ್ರತ್ಯೇಕಿಸಲಾಗಿದೆ.ಮಗುವಿನ ಆರೋಗ್ಯ ಸ್ಥಿರವಾಗಿದೆ. ಈಗ ವೈದ್ಯರು ಆಕೆಯ ಜಠರ ಭಾಗವನ್ನು ಪ್ರತ್ಯೇಕಿಸಿ ಸರಿಪಡಿಸುವಲ್ಲಿ ನಿರತರಾಗಿದ್ದಾರೆ. ಪೆಲ್ವಿಕ್ ರಿಂಗ್ ಪುನರ್ಸ್ಥಾಪನೆಯಾದಲ್ಲಿ ಶಸ್ತ್ರಚಿಕಿತ್ಸೆಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಂತಾಗುತ್ತದೆ ಎಂದು ಚಿಕಿತ್ಸೆಯ ನೇತೃತ್ವ ವಹಿಸಿರುವ ಡಾ.ಶರಣ್ ಪಾಟೀಲ್