ಇಬ್ಬರು ಪುರುಷರ ಚರ್ಮ ಕೋಶಗಳಿಂದ ಅಮೆರಿಕ ವಿಜ್ಞಾನಿಗಳು ಮೊದಲ ಬಾರಿಗೆ ತದ್ರೂಪಿ ಮಾನವ ಭ್ರೂಣವನ್ನು ಸೃಷ್ಟಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಬಳಕೆಯಾಗಬಲ್ಲ ವೈಯಕ್ತೀಕೃತ ಭ್ರೂಣದ ಕೋಶ (ಸ್ಟೆಮ್ ಸೆಲ್)ಗಳನ್ನು ರಚಿಸಲು ಸಾಧ್ಯ ಎಂಬ ವಾದಕ್ಕೆ ಪೂರಕವಾಗಿ ಇದೊಂದು ಮಹತ್ವದ ಹೆಜ್ಜೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ವಾಸ್ತವವಾಗಿ ಭ್ರೂಣಕೋಶಗಳನ್ನು ತೆಗೆಯಲಾಗುವ ಬ್ಲಾಸ್ಟೋಸಿಸ್ಟ್ ಎಂಬ ಹಂತ ತಲುಪಿದ ತದ್ರೂಪಿ ಭ್ರೂಣಗಳನ್ನು ರಚಿಸಲು ವಯಸ್ಕರ ಜೀವಕೋಶಗಳನ್ನು ಬಳಸಿದವರಲ್ಲಿ ತಾವೇ ಮೊದಲಿಗರು ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಕ್ಲೋನಿಂಗ್